ಈ ವರ್ಷಾಂತ್ಯದಲ್ಲೇ 5ಜಿ ಸೇವೆ: ಕೇಂದ್ರ ಮಾಹಿತಿ

ನವದೆಹಲಿ: ದೇಶದಲ್ಲಿ ಈ ವರ್ಷದ ಅಂತ್ಯದ ವೇಳೆಗೆ 5ಜಿ ಸೇವೆ ದೊರೆಯಲಿದೆ. ಶೀಘ್ರದಲ್ಲೇ ತರಂಗಾಂತರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸಚಿವ ದೇವುಸಿನ್ಹ ಚೌಹಾಣ್ ಶುಕ್ರವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ನಾಲ್ಕು ಕಂಪನಿಗಳಿಗೆ ಪ್ರಯೋಗಾರ್ಥವಾಗಿ ತರಂಗಾಂತರ ನೀಡಲಾಗಿದೆ. ಪ್ರಯೋಗವು ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಸ್ಯಾಮ್ಸಂಗ್ ಹೊಸ 5ಜಿ ಫೋನ್ಗಳ ಅನಾವರಣ; ಗ್ಯಾಲಕ್ಸಿ A53, A33
ಮುಂಬರುವ ಹರಾಜು ಪ್ರಕ್ರಿಯೆಗೆ ಶಿಫಾರಸುಗಳನ್ನು ಮಾಡುವಂತೆ ಭಾರತೀಯ ದೂರಸಂಪರ್ಕ ಪ್ರಾಧಿಕಾರವನ್ನು (ಟ್ರಾಯ್) ಕೋರಲಾಗಿದೆ ಎಂದೂ ಅವರು ಹೇಳಿದರು.
‘ಸದ್ಯದಲ್ಲೇ ಹರಾಜು ಪ್ರಕ್ರಿಯೆ ನಡೆಸಲಿದ್ದೇವೆ. ವರ್ಷಾಂತ್ಯದ ವೇಳೆಗೆ ದೇಶದಲ್ಲಿ 5ಜಿ ಸೇವೆ ಲಭ್ಯವಾಗಲಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಈ ವರ್ಷ 4ಜಿ ಸೇವೆ ಆರಂಭಿಸಲಿದೆ’ ಎಂದು ಅವರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.