ನವದೆಹಲಿ: ದೇಶದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸಲು ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಕಂಪನಿಗೆ ಕೇಂದ್ರ ದೂರಸಂಪರ್ಕ ಇಲಾಖೆ (ಡಿಒಟಿ) ಶುಕ್ರವಾರ ಪರವಾನಗಿ ನೀಡಿದೆ.

ಈ ಅನುಮತಿಯಿಂದಾಗಿ ದೇಶದಲ್ಲಿ ಶೀಘ್ರವೇ ಈ ಸೇವೆ ಶುರುವಾಗುವ ನಿರೀಕ್ಷೆ ಇದೆ. ಕಳೆದ ತಿಂಗಳು ಇಲಾಖೆಯು ಒಪ್ಪಂದ ಪತ್ರವನ್ನು (ಎಲ್ಒಐ) ನೀಡಿತ್ತು.

ಸೇವೆಗಳನ್ನು ಆರಂಭಿಸಲು ಸ್ಟಾರ್ಲಿಂಕ್ ಭದ್ರತಾ ಮಾನದಂಡಗಳನ್ನು ಪಾಲಿಸಿದೆ ಎಂದು ಇಲಾಖೆ ತಿಳಿಸಿದೆ.

ಈಗಾಗಲೇ ಯುಟೆಲ್ಸ್ಯಾಟ್ ಒನ್ವೆಬ್ ಮತ್ತು ಜಿಯೊ ಸ್ಯಾಟ್ಲೈಟ್ ಕಮ್ಯುನಿಕೇಷನ್ ಈ ಪರವಾನಗಿಯನ್ನು ಪಡೆದಿವೆ. ಸ್ಟಾರ್ಲಿಂಕ್ ಈ ಪರವಾನಗಿ ಪಡೆದ ಮೂರನೇ ಕಂಪನಿಯಾಗಿದ್ದು, ಅಮೆಜಾನ್ನ ಕೈಪರ್ ಅನುಮತಿಗಾಗಿ ಕಾಯುತ್ತಿದೆ.

ವಾಣಿಜ್ಯ ಉಪಗ್ರಹ ಸಂವಹನದ ತರಂಗಾಂತರದ ಬೆಲೆ, ನಿಯಮ ಮತ್ತು ನಿಬಂಧನೆಗಳ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಸರ್ಕಾರಕ್ಕೆ ಈಚೆಗಷ್ಟೇ ಶಿಫಾರಸು ಸಲ್ಲಿಸಿದೆ. ಹೀಗಾಗಿ ಸೇವೆಗಳನ್ನು ಆರಂಭಿಸಲು ಸ್ಟಾರ್ಲಿಂಕ್ ಅನುಮತಿ ಪಡೆದಿದ್ದರೂ, ಕಾಯಬೇಕಿದೆ.

ರೇಡಿಯೊ ತರಂಗಾಂತರದ ಆವರ್ತನಗಳ ಹಂಚಿಕೆಯ ನಂತರ ಸೇವೆಗಳನ್ನು ಆರಂಭಿಸಬಹುದಾಗಿದೆ.

ದೇಶದಲ್ಲಿ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆಯನ್ನು ಒದಗಿಸಲು ಈಗಾಗಲೇ ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್ಟೆಲ್ ಒಪ್ಪಂದ ಮಾಡಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.