ಗಳಿಕೆ ಹಾದಿಯಲ್ಲಿ ಷೇರುಪೇಟೆ

ಬುಧವಾರ, ಮಾರ್ಚ್ 27, 2019
26 °C
ಸತತ ಮೂರನೇ ವಾರವೂ ಸಕಾರಾತ್ಮಕ ವಹಿವಾಟು

ಗಳಿಕೆ ಹಾದಿಯಲ್ಲಿ ಷೇರುಪೇಟೆ

Published:
Updated:
Prajavani

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ವಾರವೂ ಸಕಾರಾತ್ಮಕ ವಹಿವಾಟು ಮುಂದುವರಿದಿದೆ.

ಹೂಡಿಕೆದಾರರ ಸಂಪತ್ತು ಮೌಲ್ಯ ಮಾರ್ಚ್‌ 2 ರಿಂದ 8ರವರೆಗಿನ ವಹಿವಾಟಿನಲ್ಲಿ ₹ 3.67 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ₹ 141 ಲಕ್ಷ ಕೋಟಿಗಳಿಂದ ₹ 144.67 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. 

ನಾಲ್ಕು ದಿನಗಳ ವಾರದ ವಹಿವಾಟು ಅವಧಿಯಲ್ಲಿ ಸತತ ಮೂರು ದಿನಗಳಲ್ಲಿಯೂ ಸೂಚ್ಯಂಕಗಳು ಏರಿಕೆಯಾಗಿವೆ. ಶುಕ್ರವಾರ ಮಾತ್ರವೇ ಸೂಚ್ಯಂಕ ಇಳಿಕೆ ಕಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ)  ಒಟ್ಟಾರೆ 608 ಅಂಶಗಳ ಗಳಿಕೆಯೊಂದಿಗೆ ₹ 36,671 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 172 ಅಂಶಗಳಷ್ಟು ಹೆಚ್ಚಾಗಿ 11,035 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ದೇಶಿ ಮಟ್ಟದಲ್ಲಿನ ನಡೆಯುತ್ತಿರುವ ಸಕಾರಾತ್ಮಕ ಅಂಶಗಳಿಂದಾಗಿ ಬಂಡವಾಳ ಒಳಹರಿವು ಹೆಚ್ಚಾಗುತ್ತಿದೆ. ವಿದೇಶಿ ಹೂಡಿಕೆದಾರರು ವಾರದ ವಹಿವಾಟಿನಲ್ಲಿ ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡಿದ್ದಾರೆ. ಇದರಿಂದ ಸಕಾರಾತ್ಮಕ ವಹಿವಾಟು ಮುಂದುವರಿದಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. 

ವಿದೇಶಿ ಹೂಡಿಕೆದಾರರು ಮಂಗಳವಾರ ₹ 752 ಕೋಟಿ, ಬುಧವಾರ ₹ 1,131 ಕೋಟಿ ಮತ್ತು ಗುರುವಾರ ₹ 1,138 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮೂರು ದಿನಗಳಿಂದ ಏರುಮುಖವಾಗಿದ್ದ ರೂಪಾಯಿ ಮೌಲ್ಯ ಶುಕ್ರವಾರ 14 ಪೈಸೆ ಇಳಿಕೆ ಕಂಡಿತು. ವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಒಟ್ಟಾರೆ 78 ಪೈಸೆಗಳಷ್ಟು ವೃದ್ಧಿಯಾಗಿದ್ದು, ಒಂದು ಡಾಲರ್‌ಗೆ
₹ 70.14ರಂತೆ ವಿನಿಮಯಗೊಂಡಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಒಂದು ಬ್ಯಾರೆಲ್‌ಗೆ 65.13 ಡಾಲರ್‌ಗಳಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !