ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ವಿ.ಗೆ ಸಬ್ಸಿಡಿ, ತೆರಿಗೆ ರಿಯಾಯಿತಿ ಅತ್ಯಗತ್ಯ: ಏಥರ್‌ ಎನರ್ಜಿ

Last Updated 24 ಜನವರಿ 2022, 12:17 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಬಳಕೆ ಇನ್ನಷ್ಟು ವ್ಯಾಪಕವಾಗುವಂತೆ ಮಾಡಲು ಫೇಮ್‌–2 ಯೋಜನೆಯ ಅಡಿ ಸಬ್ಸಿಡಿ ಮತ್ತು ತೆರಿಗೆ ರಿಯಾಯಿತಿ ನೀಡುವುದು ಬಹಳ ಮುಖ್ಯ ಎಂದು ಏಥರ್‌ ಎನರ್ಜಿ ಕಂಪನಿ ಅಭಿಪ್ರಾಯಪಟ್ಟಿದೆ.

ವಿದ್ಯುತ್ ಚಾಲಿತ ವಾಹನ ತಯಾರಿಸುವ ನವೋದ್ಯಮಗಳನ್ನು ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆ ಅಡಿಯಲ್ಲಿ ಸೇರಿಸುವಂತೆಯೂ ಕಂಪನಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

‘ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಫೇಮ್‌–2 ಸಬ್ಸಿಡಿಯು 2023ರ ನಂತರವೂ ಮುಂದುವರಿಯುವ ಭರವಸೆ ಇಟ್ಟುಕೊಂಡಿದ್ದೇವೆ’ ಎಂದು ಕಂಪನಿಯ ಸಹ ಸ್ಥಾಪಕ ತರುಣ್‌ ಮೆಹ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಾರ್ಜಿಂಗ್‌ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಅಗತ್ಯವೂ ಇದೆ ಎಂದು ಕಂಪನಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT