ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ: ದಾಖಲೆ ಪ್ರಮಾಣದ ರಫ್ತು

Last Updated 5 ಅಕ್ಟೋಬರ್ 2022, 17:15 IST
ಅಕ್ಷರ ಗಾತ್ರ

ನವದೆಹಲಿ: 2021–22ನೇ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ರಫ್ತು ಶೇ 57ರಷ್ಟು ಹೆಚ್ಚಾಗಿದ್ದು ದಾಖಲೆಯ 109.8 ಲಕ್ಷ ಟನ್‌ಗೆ ತಲುಪಿದೆ ಎಂದು ಸರ್ಕಾರವು ಬುಧಾವಾರ ಮಾಹಿತಿ ನೀಡಿದೆ.

ಈ ಮಾರುಕಟ್ಟೆ ವರ್ಷಕ್ಕೆ ಒಟ್ಟು 112 ಲಕ್ಷ ಟನ್‌ ಸಕ್ಕರೆ ರಫ್ತು ಮಾಡಲು ಸರ್ಕಾರ ಅವಕಾಶ ನೀಡಿತ್ತು. ಸಕ್ಕರೆ ಕಾರ್ಖಾನೆಗಳು 109.8 ಲಕ್ಷ ಟನ್‌ಗಳಷ್ಟನ್ನು ಮಾತ್ರವೇ ರಫ್ತು ಮಾಡಿವೆ.

2021–22ನೇ ಮಾರುಕಟ್ಟೆ ವರ್ಷದಲ್ಲಿ ಭಾರತವು ಸಕ್ಕರೆ ಉತ್ಪಾದನೆ ಮತ್ತು ಬಳಕೆಯಲ್ಲಿ ವಿಶ್ವದ ಅತಿದೊಡ್ಡ ದೇಶವಾಗಿದೆ. ಅಲ್ಲದೆ, ಸಕ್ಕರೆ ರಫ್ತಿನಲ್ಲಿ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ ಎಂದು ಆಹಾರ ಸಚಿವಾಲಯವು ತಿಳಿಸಿದೆ.

ಮಾರುಕಟ್ಟೆ ವರ್ಷದಲ್ಲಿ 5 ಸಾವಿರ ಲಕ್ಷ ಟನ್‌ಗಳಷ್ಟು ದಾಖಲೆ ಪ್ರಮಾಣದಲ್ಲಿ ಕಬ್ಬು ಉತ್ಪಾದನೆ ಆಗಿದ್ದು, ಅದರಲ್ಲಿ 394 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಆಗಿದೆ. ಇದರಲ್ಲಿ 35 ಲಕ್ಷ ಟನ್‌ ಸಕ್ಕರೆಯನ್ನು ಎಥೆನಾಲ್‌ ಉತ್ಪಾದನೆಗೆ ಬಳಸಲಾಗಿದೆ ಎಂದು ಹೇಳಿದೆ.

2021–22ನೇ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಬಾಕಿ ಮೊತ್ತವು ₹ 6 ಸಾವಿರ ಕೋಟಿಯಷ್ಟು ಇದೆ. ಕಾರ್ಖಾನೆಗಳು ಒಟ್ಟಾರೆ ₹1.18 ಲಕ್ಷ ಕೋಟಿ ಬಾಕಿ ಪಾವತಿಸಬೇಕಿತ್ತು. ಅದರಲ್ಲಿ ₹1.12 ಲಕ್ಷ ಕೋಟಿ ಮೊತ್ತವನ್ನು ಈಗಾಗಲೇ ರೈತರಿಗೆ ಪಾವತಿ ಮಾಡಿವೆ.

ರಫ್ತು ವಿವರ (ಲಕ್ಷ ಟನ್‌ಗಳಲ್ಲಿ)

2018–29;38

2019–20;59

2020–21;70

2021–22;109.8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT