ಗುರುವಾರ , ಆಗಸ್ಟ್ 5, 2021
21 °C

ಟಾಟಾ ಮೋಟರ್ಸ್‌: 6 ತಿಂಗಳ ‘ಇಎಂಐ’ ಮುಂದೂಡಿಕೆ ಕೊಡುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟಿಯಾಗೊ, ನೆಕ್ಸಾನ್ ಮತ್ತು ಆಲ್ಟ್ರೋಜ್‌ ಖರೀದಿಸುವ ಗ್ರಾಹಕರಿಗೆ ಆರು ತಿಂಗಳವರೆಗೆ ಇಎಂಐ ಮುಂದೂಡಿಕೆಯ ಯೋಜನೆಯನ್ನು ಟಾಟಾ ಮೋಟರ್ಸ್‌ ಪರಿಚಯಿಸಿದೆ.

ಯೋಜನೆಯಡಿ ಗ್ರಾಹಕರು ಯಾವುದೇ ಮುಂಗಡ ಹಣ ಪಾವತಿಸದೆ ಆರು ತಿಂಗಳ ‘ಇಎಂಐ’ಗಳನ್ನೂ ಮುಂದೂಡಿಕೆ ಮಾಡಬಹುದು. ಆದರೆ, ಈ ಅವಧಿಯಲ್ಲಿ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾಗುತ್ತದೆ. ಐದು ವರ್ಷಗಳ ಅವಧಿಗೆ ಶೇ 100ರಷ್ಟು ಆನ್‌ರೋಡ್‌ ಸಾಲ ಸೌಲಭ್ಯವೂ ಸಿಗಲಿದೆ ಎಂದು  ತಿಳಿಸಿದೆ.

ವೇತನ ವರ್ಗ ಮತ್ತು ಸ್ವ–ಉದ್ಯೋಗದಲ್ಲಿ ಇರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಕಂಪನಿಯು ಕರೂರ್‌ ವೈಶ್ಯ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ತನ್ನ ವಿವಿಧ ಹಣಕಾಸು ಪಾಲುದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕೈಗೆಟುಕುವ,  8 ವರ್ಷಗಳ  ದೀರ್ಘಾವಧಿಯ, ಆರಂಭದಲ್ಲಿ ಕಡಿಮೆ ಇಎಂಐ ಪಾವತಿಸಿ ಕ್ರಮೇಣ ಹೆಚ್ಚಾಗುವ ಕೊಡುಗೆಯೂ ಲಭ್ಯವಿದೆ ಎಂದೂ ಹೇಳಿದೆ.

ಅಂಕಿ–ಅಂಶ

14,571 -2020–21ರ ಏಪ್ರಿಲ್‌–ಜೂನ್ ತ್ರೈಮಾಸಿಕದಲ್ಲಿ ಮಾರಾಟ

36,945 -2019–20ರ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಮಾರಾಟ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು