ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್‌ಗೆ ಲಾಭ

Published 25 ಜುಲೈ 2023, 14:13 IST
Last Updated 25 ಜುಲೈ 2023, 14:13 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯ ಜೂನ್‌ ತ್ರೈಮಾಸಿಕದ ಲಾಭವು ₹3,300 ಕೋಟಿ ಆಗಿದೆ. ಟಾಟಾ ಮೋಟರ್ಸ್‌ನ ಅಂಗಸಂಸ್ಥೆಯಾಗಿರುವ ಜಾಗ್ವರ್ ಲ್ಯಾಂಡ್‌ ರೋವರ್ಸ್‌ನ ವಹಿವಾಟುಗಳಲ್ಲಿನ ಸುಧಾರಣೆಯು ಲಾಭ ಗಳಿಕೆಗೆ ನೆರವಾಗಿದೆ.

ಕಂಪನಿಯು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹4,950 ಕೋಟಿ ನಷ್ಟ ಅನುಭವಿಸಿತ್ತು. ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನವು ₹1.01 ಲಕ್ಷ ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹71 ಸಾವಿರ ಕೋಟಿ ಆಗಿತ್ತು.

ಬಜಾಜ್ ಆಟೊ ಲಾಭ ಏರಿಕೆ

ಬಜಾಜ್ ಆಟೊ ಕಂಪನಿಯ ತೆರಿಗೆ ನಂತರದ ಲಾಭವು ಜೂನ್‌ ತ್ರೈಮಾಸಿಕದಲ್ಲಿ ಶೇ 42ರಷ್ಟು ಹೆಚ್ಚಾಗಿದ್ದು, ₹1,665 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಲಾಭವು ₹1,173 ಕೋಟಿ ಆಗಿತ್ತು.

ಕಂಪನಿಯ ಕಾರ್ಯಾಚರಣೆ ವರಮಾನವು ಜೂನ್ ತ್ರೈಮಾಸಿಕದಲ್ಲಿ ಶೇ 29ರಷ್ಟು ಹೆಚ್ಚಾಗಿದ್ದು ₹10,310 ಕೋಟಿಗೆ ತಲುಪಿದೆ. ಇದು ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹8,005 ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT