ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್ 22ಕ್ಕೆ ಟಾಟಾ ಟೆಕ್ನಾಲಜೀಸ್‌ ಐಪಿಒ

Published 15 ನವೆಂಬರ್ 2023, 11:41 IST
Last Updated 15 ನವೆಂಬರ್ 2023, 11:41 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಟೆಕ್ನಾಲಜೀಸ್‌ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕ ಖರೀದಿಗೆ ಮುಕ್ತಗೊಳಿಸುವ (ಆರಂಭಿಕ ಷೇರು ಮಾರಾಟ– ಐಪಿಒ) ಮೂಲಕ ನವೆಂಬರ್ 22ರಂದು ಷೇರುಪೇಟೆ ಪ್ರವೇಶಿಸಲಿದೆ.

ನವೆಂಬರ್‌ 22 ರಿಂದ 24ರವರೆಗೆ ಷೇರುಗಳನ್ನು ಖರೀದಿಸಲು ಅವಕಾಶ ಇರಲಿದೆ. ಐಪಿಒ ಮೂಲಕ 6 ಕೋಟಿ ಷೇರುಗಳನ್ನು ಮಾರಾಟ ಮಾಡಲಾಗುವುದು ಎಂದು ಟಾಟಾ ಮೋಟರ್ಸ್‌ ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಈ ಪ್ರಕ್ರಿಯೆಯ ಭಾಗವಾಗಿ, ಟಾಟಾ ಮೋಟರ್ಸ್‌ ಕಂಪನಿಯು ಶೇ 11.4ರಷ್ಟು ಷೇರುಗಳನ್ನು, ಆಲ್ಫಾ ಟಿಸಿ ಹೋಲ್ಡಿಂಗ್ಸ್ ಶೇ 2.4ರಷ್ಟು ಷೇರುಗಳನ್ನು ಮತ್ತು ಟಾಟಾ ಕ್ಯಾಪಿಟಲ್‌ ಗ್ರೋತ್‌ ಫಂಡ್‌ 1 ಶೇ 1.2ರಷ್ಟು ಷೇರುಗಳನ್ನು ಮಾರಾಟ ಮಾಡಲಿವೆ.

ಟಾಟಾ ಟೆಕ್ನಾಲಜೀಸ್‌ನಲ್ಲಿ ಇರುವ ಶೇ 9.9ರಷ್ಟು ಷೇರುಗಳನ್ನು ಟಿಪಿಜಿ ರೈಸ್ ಕ್ಲೈಮೇಟ್‌ ಕಂಪನಿಗೆ ₹1,613 ಕೋಟಿಗೆ ಮಾರಾಟ ಮಾಡುವುದಾಗಿ ಕಳೆದ ತಿಂಗಳು ಟಾಟಾ ಮೋಟರ್ಸ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT