ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಇಷ್ಟು ದಿನದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು
Published 5 ಮೇ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸುಖಗಳ ಮೇಲಿನ ಮೋಹ ಬಿಟ್ಟು ಆಂತರಿಕ ಸಂತೋಷ ಹುಡುಕುವ ಕಾರ್ಯಕ್ಕೆ ಸಾಧಕರು ತೆರಳಲಿದ್ದೀರಿ. ಇಷ್ಟು ದಿನದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಉತ್ತಮ ಗಳಿಕೆ ನಿರೀಕ್ಷಿಸಬಹುದು.
ವೃಷಭ
ನೂತನವಾಗಿ ನಿರ್ಮಿಸಿರುವ ಮನೆಗಾಗಿ ಆಲಂಕಾರಿಕ ವಸ್ತುಗಳ ಖರೀದಿ ನಡೆಯುವುದು. ಯಶಸ್ಸಿನ ಹೊಸ ಮಾರ್ಗಗಳ ಅರಿವಾಗುವುದು. ರುಚಿ ರುಚಿಯಾದ ಅಡುಗೆಗೆ ಹೊಸ ಅಭಿಮಾನಿಗಳ ಸಂಪಾದನೆ ಆಗುತ್ತದೆ.
ಮಿಥುನ
ತಾಯಿಯ ಮಾತನ್ನು ಕೇಳಿದ್ದರೆ ಆಗುತ್ತಿತ್ತು ಎಂದು ಮುಂದೊಂದು ದಿನ ಸ್ಮರಿಸುವ ಬದಲು ಇಂದೇ ಕೇಳಿ. ಮಕ್ಕಳ ಮೊದಲ ತೊದಲ ನುಡಿಗಳು ಹರ್ಷಕ್ಕೆ ಕಾರಣೀಭೂತವಾಗುವುದು. ಲಂಚದ ಬಲೆಗೆ ಬೀಳದಿರಿ.
ಕರ್ಕಾಟಕ
ಮನೆಯ ಪ್ರಶಾಂತತೆ ಕಾಪಾಡಿಕೊಂಡು ಉತ್ತಮ ಕಾರ್ಯಗಳಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಿರಿ. ಇಷ್ಟದ ತಿಂಡಿ ತಿನಿಸುಗಳೊಂದಿಗೆ ದಿನ ಕಳೆಯುವಿರಿ.
ಸಿಂಹ
ವೃತ್ತಿರಂಗದಲ್ಲಿ ಹಿತೈಷಿಗಳ ಅಥವಾ ಅಕ್ಕಪಕ್ಕದವರ ಮಾತುಗಳನ್ನು ಲೆಕ್ಕಿಸದೇ ಮುನ್ನುಗ್ಗುವುದು ಸರಿ ಎನಿಸುವುದು. ವಿಷಯಾನ್ವೇಷಣೆಯ ಕೌಶಲದಿಂದಾಗಿ ಪತ್ರಿಕೋದ್ಯಮಿಗಳು ಗೌರವಕ್ಕೆ ಪಾತ್ರರಾಗುವಿರಿ.
ಕನ್ಯಾ
ಅನೇಕ ಅಚ್ಚರಿಯ ಸಂಗತಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಕೊಡಲು ದೇವರಲ್ಲಿ ಪ್ರಾರ್ಥಿಸಿ. ಸಣ್ಣ ಮಕ್ಕಳ ಶಿಕ್ಷಕರು ಸಂತೋಷದಿಂದ ಖುಷಿ ಹೊಂದುವಿರಿ. ಬಿಸಿ ವಸ್ತು ಹಾಗು ವಿದ್ಯುತ್ ವಿಚಾರದಲ್ಲಿ ಎಚ್ಚರವಿರಲಿ.
ತುಲಾ
ವಿದ್ಯಾಭ್ಯಾಸದಲ್ಲಿ ಹಿನ್ನಡೆ ತೋರಿಬಂದು ವಿದ್ಯಾರ್ಥಿಗಳಿಗೆ ನಿರಾಸೆ ಕಾಡಲಿದೆ. ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ವಾಗ್ವಾದಗಳಿಗೆ ಆಸ್ಪದ ಕೊಡಬೇಡಿ. ದೇವರ ಆರಾಧನೆಯಲ್ಲಿ ಸಂತಸ ಹೊಂದುವಿರಿ.
ವೃಶ್ಚಿಕ
ಕಚೇರಿಯಲ್ಲಿ ನ ಕೆಲಸದ ಒತ್ತಡಗಳನ್ನು ಕುಟುಂಬದ ಸದಸ್ಯರ ಮೇಲೆ ಹೇರಬೇಡಿ. ಕಾರ್ಯದ ಸಾಧನೆಗೆ ಕಳೆದುಕೊಂಡ ಸ್ನೇಹಿತನ ಸಹಾಯ ಅಗತ್ಯವೆನ್ನಿಸುವುದು. ಸೂಕ್ತವಾದ ಗೆಳೆಯರು ಸಿಗಲಿದ್ದಾರೆ.
ಧನು
ಜನವಾಣಿಗೆ ಸ್ಪಂದಿಸುವ ರಾಜಕಾರಣಿಗಳಿಗೆ ಹಿಂಬಾಲಕರ ಬೆಂಬಲ ಸಿಗಲಿದೆ. ಮೈದುನನ ಸಹಾಯದಿಂದ ತವರು ಮನೆಯ ಕೆಲವರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬೆಂಕಿಯ ಬಗ್ಗೆ ಜಾಗ್ರತೆಯಿಂದಿರಿ.
ಮಕರ
ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ತೊರೆದು ಬಂದ ಮೂಲಮನೆಯಲ್ಲಿದ್ದ ಸುವ್ಯವಸ್ಥೆಗಳನ್ನು ನೆನೆಸಿಕೊಂಡು ಈಗ ಮರುಗುವಂತಾಗುತ್ತದೆ.
ಕುಂಭ
ತಿಳಿದಿರುವ ವಿಶೇಷವಾದ ಸಂಗತಿಗಳನ್ನು ಬೇರೆಯವರಿಗೆ ತಿಳಿಸಿ ಆಶ್ಚರ್ಯ ಪಡುವುದರಲ್ಲಿ ಖುಷಿ ಪಡುತ್ತೀರಿ. ಹೊಸ ವ್ಯವಹಾರವೊಂದರ ಪ್ರಾರಂಭಕ್ಕೆ ಬೇಕಾದ ಮಾಹಿತಿಗಳ ಸಂಗ್ರಹ ನಡೆಯುವುದು.
ಮೀನ
ಸರ್ವಗುಣ ಸಂಪನ್ನನಾದ ಮಗನ ಕೀರ್ತಿ ಉನ್ನತ ಮಟ್ಟದಲ್ಲಿ ಕೇಳಿಬರುತ್ತಿರುವ ಬಗ್ಗೆ ಹೆಮ್ಮೆಯೆಂದೆನಿಸುತ್ತದೆ. ಬಾಡಿಗೆ ರೂಪದಲ್ಲಿ ಸಂಘ ಸಂಸ್ಥೆಯೊಂದಕ್ಕೆ ಕಟ್ಟಡವನ್ನು ಕಟ್ಟಿಸಿಕೊಡಲು ಒತ್ತಡಬರಲಿದೆ.