ನವದೆಹಲಿ (ಪಿಟಿಐ): ಪಾಲ್ಗೊಳ್ಳುವಿಕೆ ಶುಲ್ಕ ವಿಧಿಸದಿದ್ದರೆ, ಹಣಕಾಸಿನ ಮತ್ತು ಕಾರ್ಯನಿರ್ವಹಣಾ ವೆಚ್ಚಗಳ ಹೊಣೆಯನ್ನು ಫೆಡರೇಷನ್ ವಹಿಸಿಕೊಂಡರೆ 2025–26ನೇ ಋತುವಿನ ಇಂಡಿಯನ್ ಸೂಪರ್ ಲೀಗ್ನಲ್ಲಿ (ಐಎಸ್ಎಲ್) ಭಾಗವಹಿಸಲು ತಮ್ಮ ಸಮ್ಮತಿ ಇರುವುದಾಗಿ 14 ಕ್ಲಬ್ಗಳ ಪೈಕಿ 13 ಕ್ಲಬ್ಗಳು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ಗೆ (ಎಐಎಫ್ಎಫ್) ತಿಳಿಸಿವೆ.

ಐಎಸ್ಎಲ್ನಲ್ಲಿ ಭಾಗವಹಿಸಲು ಷರತ್ತುಗಳನ್ನು ವಿಧಿಸಿರುವ ಕ್ಲಬ್ಗಳು, ‘ದೀರ್ಘಾವಧಿ ಯೋಜನೆಗೆ ಸ್ಪಷ್ಟ ಮತ್ತು ಕಾಲಮಿತಿಯೊಡನೆ ನಕ್ಷೆ ಸಿದ್ಧಪಡಿಸುವಂತೆ’ ಫೆಡರೇಷನ್ಗೆ ವಿನಂತಿಸಿವೆ. ಈ ಯೋಜನೆಗಳಲ್ಲಿ ವಾಣಿಜ್ಯ ಪಾಲುದಾರರ/ ಪ್ರಸಾರ ಸಂಸ್ಥೆಯ ನೇಮಕಕ್ಕೆ ಸಂಬಂಧಿಸಿ ಗಡುವನ್ನು ವಿಧಿಸಬೇಕು ಎಂದೂ ಕೋರಿವೆ.

‘ಈ ಮೇಲಿನ ಮನವಿಗಳಿಗೆ ಒಪ್ಪಿಗೆ ನೀಡಿದಲ್ಲಿ ಐಎಸ್ಎಲ್ನಲ್ಲಿ ಭಾಗವಹಿಸಲು ಮತ್ತು ಸಹಕಾರ ನೀಡಲು ನಮ್ಮ ಒಪ್ಪಿಗೆಯಿದೆ’ ಎಂದು 13 ಕ್ಲಬ್ಗಳು ಪತ್ರದಲ್ಲಿ ತಿಳಿಸಿವೆ ಎಂದು ಎಐಎಫ್ಎಫ್ ಗುರುವಾರ ತಿಳಿಸಿದೆ.

ಐಎಸ್ಎಲ್ನಲ್ಲಿ ಪಾಲ್ಗೊಳ್ಳುವುದನ್ನು ಒಂದು ದಿನದಲ್ಲಿ ಖಚಿತಪಡಿಸುವಂತೆ ಫೆಡರೇಷನ್ ಬುಧವಾರ ಕ್ಲಬ್ಗಳಿಗೆ ತಿಳಿಸಿತ್ತು.

ಸ್ಪೋರ್ಟಿಂಗ್ ಕ್ಲಬ್ ಡೆಲ್ಲಿ ಸಿಇಒ ಧ್ರುವ್ ಸೂದ್ ಅವರು 13 ಕ್ಲಬ್ಗಳ ಪರವಾಗಿ ಈ ಪತ್ರವನ್ನುಬರೆದಿದ್ದಾರೆ.

ಮೋಹನ್ ಬಾಗನ್ ಸೂಪರ್ ಜೈಂಟ್ಸ್, ಈಸ್ಟ್ ಬೆಂಗಾಲ್, ಕೇರಳ ಬ್ಲಾಸ್ಟರ್ಸ್, ಎಫ್ಸಿ ಗೋವಾ, ಸ್ಪೋರ್ಟಿಂಗ್ ಕ್ಲಬ್ ಡೆಲ್ಲಿ, ಬೆಂಗಳೂರು ಎಫ್ಸಿ, ಮುಂಬೈ ಸಿಟಿ ಎಫ್ಸಿ, ಚೆನ್ನೈಯಿನ್ ಎಫ್ಸಿ, ಮೊಹಮ್ಮಡನ್ ಸ್ಪೋರ್ಟಿಂಗ್, ಪಂಜಾಬ್ ಎಫ್ಸಿ, ಇಂಟರ್ ಕಾಶಿ, ನಾರ್ತ್ಈಸ್ಟ್ ಯನೈಟೆಡ್ ಎಫ್ಸಿ ಮತ್ತು ಒಡಿಶಾ ಎಫ್ಸಿ ಭಾಗವಹಿಸಲು ಮುಂದಾಗಿರುವ ಕ್ಲಬ್ಗಳು. ಆದರೆ ಜಮ್ಷೆಡ್ಪುರ ಎಫ್ಸಿ ಹೆಸರು ಪತ್ರದಲ್ಲಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.