ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮ್ಸನ್‌ನಿಂದ ವಿನೂತನ ಏರ್‌ಕೂಲರ್‌ಗಳ ಬಿಡುಗಡೆ

Published 26 ಮಾರ್ಚ್ 2024, 7:49 IST
Last Updated 26 ಮಾರ್ಚ್ 2024, 7:49 IST
ಅಕ್ಷರ ಗಾತ್ರ

ಬೆಂಗಳೂರು: ಯೂರೋಪಿನ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಥಾಮ್ಸನ್ ಹೊಸ ಶ್ರೇಣಿಯ ಏರ್ ಕೂಲರ್‌ಗಳನ್ನು ಬಿಡುಗಡೆ ಮಾಡಿದೆ.

'ಮೇಕ್ ಇನ್ ಇಂಡಿಯಾ' ಘೋಷಾ ವಾಕ್ಯಕ್ಕೆ ಪೂರಕವಾಗಿ ಏರ್ ಕೂಲರ್‌ಗಳನ್ನು ಭಾರತದ ನೋಯ್ಡಾದಲ್ಲೇ ತಯಾರಿಸಿರುವ ಥಾಮ್ಸನ್, ಭಾರತದ ಆನ್‌ಲೈನ್ ಮಾರುಕಟ್ಟೆಯಲ್ಲಿ ಏರ್‌ಕೂಲರ್‌ಗಳಲ್ಲಿ ಶೇ 10ರಷ್ಟು ಪಾಲು ಹೊಂದಿದೆ. ಥಾಮ್ಸನ್‌ನ ಅಧಿಕೃತ ಬ್ರ್ಯಾಂಡ್ ಪರವಾನಗಿದಾರ ಎಸ್‌ಪಿಪಿಎಲ್ ಮೂಲಕ ಇವುಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿನೂತನ ಕೂಲ್ ಪ್ರೊ ಹಾಗೂ ಹೆವಿ ಡ್ಯೂಟಿ ಶ್ರೇಣಿಯ ಏರ್‌ಕೂಲರ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

ಈ ಏರ್‌ಕೂಲರ್‌ಗಳ ವಿನ್ಯಾಸಕ್ಕೆ ಎಸ್‌ಪಿಪಿಎಲ್ ಪೇಟೆಂಟ್ ಹೊಂದಿದೆ.

28 ಲೀ. ಸಾಮರ್ಥ್ಯದಿಂದ 150 ಲೀ. ಸಾಮರ್ಥ್ಯವರೆಗಿನ ಏರ್‌ಕೂಲರ್‌ಗಳ ಶ್ರೇಣಿ ಇದೆ.

28 ಲೀ. ಪರ್ಸನಲ್ ಏರ್‌ಕೂಲರ್ ಬೆಲೆ ₹3999, 105 ಲೀ. ಥಾಮ್ಸನ್ ಎಕ್ಸ್ಎಲ್ ಹೆವಿ ಡ್ಯೂಟಿ ಡೆಸರ್ಟ್ ಏರ್‌ಕೂಲರ್ ಬೆಲೆ ₹9999, 115 ಲೀ. ಥಾಮ್ಸನ್ ಎಕ್ಸ್ಎಕ್ಸ್ಎಲ್ ಹೆವಿ ಡ್ಯೂಟಿ ಡೆಸರ್ಟ್ ಏರ್‌ಕೂಲರ್ ಬೆಲೆ ₹10,299 ಹಾಗೂ 150 ಲೀ. ಥಾಮ್ಸನ್ ಸೂಪರ್ ಹೆವಿ ಡ್ಯೂಟಿ ಡೆಸರ್ಟ್ ಏರ್‌ಕೂಲರ್ ಬೆಲೆ ₹14,999 ಎಂದು ಥಾಮ್ಸನ್ ಪ್ರಕಟಣೆ ತಿಳಿಸಿದೆ.

ಈ ಏರ್‌ಕೂಲರ್‌ಗಳಲ್ಲಿ ನೀರಿನ ಮಟ್ಟದ ಇಂಡಿಕೇಟರ್‌ಗಳು, ಹನಿಕೂಂಬ್ ಕೂಲಿಂಗ್ ಮೀಡಿಯಾ ವ್ಯವಸ್ಥೆ, ಶಬ್ದರಹಿತವಾದ ಸ್ಲೀಕ್ ವಿನ್ಯಾಸಗಳು ಇವೆ. ಶ್ರೇಣಿಗನುಗುಣವಾಗಿ 25 ಅಡಿಯಿಂದ 90 ಅಡಿವರೆಗೂ ಇವು ತಂಪಾದ ಗಾಳಿ ಹರಡಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT