ಶನಿವಾರ, ಜುಲೈ 31, 2021
28 °C

ಚೀನಾದಿಂದ ಆಮದು ಇಲ್ಲ: ಟಿಟಿಕೆ ಪ್ರೆಸ್ಟೀಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿದ್ಧ ಉತ್ಪನ್ನಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ಸೆಪ್ಟೆಂಬರ್‌ ತಿಂಗಳಿನಿಂದ ಸ್ಥಗಿತಗೊಳಿಸುವುದಾಗಿ ಟಿಟಿಕೆ ಪ್ರೆಸ್ಟೀಜ್‌ ಕಂಪನಿ ಹೇಳಿದೆ. 

ಕಂಪನಿಯು ‘ಭಾರತದಲ್ಲೇ ತಯಾರಿಸಿ’ ಆಶಯ ಈಡೇರಿಸಲು ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಭಾರತದಲ್ಲೇ ತಯಾರಾದ ಉತ್ಪನ್ನಗಳನ್ನು ಖರೀದಿಸಲು ಆರಂಭಿಸಿದೆ. ಸದ್ಯಕ್ಕೆ ತನ್ನ ಅಗತ್ಯದ ಶೇಕಡ 10ರಷ್ಟು ಉತ್ಪನ್ನಗಳನ್ನು ಮಾತ್ರ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ ಎಂದು ಕಂಪನಿ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ದ ಆಶಯದಂತೆ, ಭಾರತದಲ್ಲೇ ತಯಾರಿಸಿದ ಉತ್ಪನ್ನಗಳನ್ನು ಒದಗಿಸುವುದು ಕಂಪನಿಯ ಗುರಿ. ತನಗೆ ಅಗತ್ಯವಿರುವ ಯಾವುದಾದರೂ ಉತ್ಪನ್ನ ಭಾರತದಲ್ಲಿ ಸಿಗುತ್ತಿಲ್ಲ ಎಂದಾದರೆ, ಅದನ್ನು ಚೀನಾ ಹೊರತುಪಡಿಸಿ ಬೇರೆ ದೇಶಗಳಿಂದ ತರಿಸಿಕೊಳ್ಳಲಾಗುತ್ತದೆ ಎಂದು ಅದು ತಿಳಿಸಿದೆ.

ಅಡುಗೆ ಮನೆಗೆ ಅಗತ್ಯವಿರುವ ಉಪಕರಣಗಳನ್ನು ಪೂರೈಸುವಲ್ಲಿ ಟಿಟಿಕೆ ಪ್ರೆಸ್ಟೀಜ್‌ ಭಾರತದಲ್ಲಿ ದೊಡ್ಡ ಬ್ರ್ಯಾಂಡ್‌ ಆಗಿ ಬೆಳೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.