ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಚಿಲ್ಲರೆ ಹಣದುಬ್ಬರ ಇಳಿಕೆ

Published 20 ಮಾರ್ಚ್ 2024, 15:16 IST
Last Updated 20 ಮಾರ್ಚ್ 2024, 15:16 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನಲ್ಲಿ ಚಿಲ್ಲರೆ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 3.4ಕ್ಕೆ ಇಳಿಕೆಯಾಗಿದೆ. ಹಾಗಾಗಿ, ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಮುಂಬರುವ ತಿಂಗಳುಗಳಲ್ಲಿ ಬಡ್ಡಿದರವನ್ನು ಕಡಿತಗೊಳಿಸಬಹುದು ಎಂಬ ನಿರೀಕ್ಷೆಗಳು ಗರಿಗೆದರಿವೆ.

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಈ ಹಣದುಬ್ಬರವು ಜನವರಿಯಲ್ಲಿ ಶೇ 4ರಷ್ಟು ದಾಖಲಾಗಿತ್ತು. ಹಾಗಾಗಿ, ಫೆಬ್ರುವರಿಯಲ್ಲಿ ಶೇ 3.6ಕ್ಕೆ ತಗ್ಗಲಿದೆ ಎಂದು ಹಣಕಾಸು ತಜ್ಞರು ಅಂದಾಜಿಸಿದ್ದರು. ಅವರ ನಿರೀಕ್ಷೆಯನ್ನೂ ಮೀರಿ ಇಳಿಕೆಯಾಗಿದೆ.

ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದೇ ಹಣದುಬ್ಬರ ಇಳಿಕೆಗೆ ಕಾರಣವಾಗಿದ್ದು, 2021ರ ಸೆಪ್ಟೆಂಬರ್‌ ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬುಧವಾರ ತಿಳಿಸಿದೆ.‌

ಹಣದುಬ್ಬರವನ್ನು ಶೇ 2ರ ಮಿತಿಯಲ್ಲಿ ಕಾಯ್ದುಕೊಳ್ಳಲು ಕೇಂದ್ರೀಯ ಬ್ಯಾಂಕ್‌ ಪ್ರಯತ್ನಿಸುತ್ತಿದೆ. ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ಆಕ್ರಮಣದ ವೇಳೆ ಇಂಧನ ವೆಚ್ಚ ದುಬಾರಿಯಾಗಿತ್ತು. ಹಾಗಾಗಿ, 2022ನೇ ಸಾಲಿನ ಅಂತ್ಯದಲ್ಲಿ ಚಿಲ್ಲರೆ ಹಣದುಬ್ಬರವು ಶೇ 11ಕ್ಕೆ ಏರಿಕೆಯಾಗಿತ್ತು.

ಸದ್ಯ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಶೇ 5.25ರಷ್ಟು ಬಡ್ಡಿದರವನ್ನು ಕಾಯ್ದುಕೊಂಡಿದ್ದು, ಇದು 16 ವರ್ಷಗಳ ಗರಿಷ್ಠ ಮಟ್ಟವಾಗಿದೆ.

ಬ್ರಿಟನ್‌ನಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹಾಗಾಗಿ, ಹಣದುಬ್ಬರ ನಿಯಂತ್ರಿಸುವುದು ಪ್ರಧಾನಿ ರಿಷಿ ಸುನಕ್‌ ನೇತೃತ್ವದ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷಕ್ಕೆ ಸವಾಲಾಗಿ ಪರಿಣಮಿಸಿತ್ತು.

ವಿರೋಧ ಪಕ್ಷವಾದ ಲೇಬರ್‌ ಪಾರ್ಟಿಯು ಚುನಾವಣೆಯಲ್ಲಿ ಈ ವಿಷಯವನ್ನೇ ಅಸ್ತ್ರವಾಗಿ ಬಳಸಲು ಮುಂದಾಗಿತ್ತು. ಈಗ ಹಣದುಬ್ಬರವು ಇಳಿಕೆಯತ್ತ ಸಾಗಿರುವುದು ಸುನಕ್‌ ಸರ್ಕಾರಕ್ಕೆ ತುಸು ಸಮಾಧಾನ ತಂದಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT