ನವದೆಹಲಿ : ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ನ (ಐಸಿಎಲ್) ಷೇರುಗಳ ಸ್ವಾಧೀನಕ್ಕೆ ಮುಂದಾಗಿರುವ ಆದಿತ್ಯ ಬಿರ್ಲಾ ಸಮೂಹಕ್ಕೆ ಸೇರಿದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ನೋಟಿಸ್ ನೀಡಿದೆ.

ಸ್ಪರ್ಧಾತ್ಮಕ ಕಾಯ್ದೆ 2002ರ ಸೆಕ್ಷನ್ 29(1)ರ ಅನ್ವಯ ನೋಟಿಸ್ ಸ್ವೀಕರಿಸಲಾಗಿದೆ. ಆಯೋಗದ ಮುಂದೆ ಕಂಪನಿಯಿಂದ ವಿವರಣೆ ಸಲ್ಲಿಸಲಾಗುವುದು ಎಂದು ಅಲ್ಟ್ರಾಟೆಕ್ ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಪ್ರಸ್ತಾವಿತ ಹೆಚ್ಚುವರಿ ಷೇರುಗಳ ಸ್ವಾಧೀನ ಪ್ರಕ್ರಿಯೆಯು ಸಿಮೆಂಟ್ ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಮಾನ ನೆಲೆಯಲ್ಲಿ ನಡೆಯಬೇಕಿರುವ ಸ್ಪರ್ಧೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಈ ನೋಟಿಸ್ ನೀಡಲಾಗಿದೆ. ಇದಕ್ಕೆ ಉತ್ತರಿಸಲು 15 ದಿನಗಳ ಗಡುವು ನೀಡಲಾಗಿದೆ.

ದಕ್ಷಿಣ ಭಾರತದಲ್ಲಿ 35ಕ್ಕೂ ಹೆಚ್ಚು ಸಿಮೆಂಟ್ ತಯಾರಕರು ಇದ್ದಾರೆ. ಈ ಪೈಕಿ ತಮಿಳುನಾಡಿನ ಐಸಿಎಲ್ ಪ್ರಮುಖ ಕಂಪನಿಯಾಗಿದೆ. ಇದರ ಪ್ರವರ್ತಕರಿಂದ ಹೆಚ್ಚುವರಿಯಾಗಿ ಶೇ 32.72ರಷ್ಟು ಷೇರುಗಳ ಸ್ವಾಧೀನಕ್ಕೆ ಅಲ್ಟ್ರಾಟೆಕ್ ಸಿಮೆಂಟ್ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.