ಭಾನುವಾರ, ಅಕ್ಟೋಬರ್ 20, 2019
21 °C

ಫೋಕ್ಸ್‌ವ್ಯಾಗನ್‌ – ಸ್ಕೋಡಾ ಇಂಡಿಯಾ ವಿಲೀನ

Published:
Updated:

ನವದೆಹಲಿ: ಜರ್ಮನಿಯ ಫೋಕ್ಸ್‌ವ್ಯಾಗನ್‌ ಸಮೂಹವು ಭಾರತದಲ್ಲಿ ತನ್ನ ಅಸ್ತಿತ್ವ ಬಲಪಡಿಸುವ ಉದ್ದೇಶದಿಂದ ಮೂರು ಕಂಪನಿಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ.

ಫೋಕ್ಸ್‌ವ್ಯಾಗನ್‌ ಇಂಡಿಯಾ, ಫೋಕ್ಸ್‌ವ್ಯಾಗನ್‌ ಗ್ರೂಪ್‌ ಸೇಲ್ಸ್‌ ಇಂಡಿಯಾ ಮತ್ತು ಸ್ಕೋಡಾ ಆಟೊ ಇಂಡಿಯಾ ಕಂಪನಿಗಳನ್ನು ವಿಲೀನಗೊಳಿಸಲು ಒಪ್ಪಿಗೆ ದೊರೆತಿದೆ. ವಿಲೀನದ ಬಳಿಕ ಸ್ಕೋಡಾ ಆಟೊ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಿದೆ.

ಭಾರತದ ಮಾರುಕಟ್ಟೆಗೆ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್‌ ವಾಹನಗಳನ್ನು ಅಭಿವೃದ್ಧಿಪಡಿಸಲು ರೂಪಿಸಿರುವ ‘ಇಂಡಿಯಾ 2.0’ ಯೋಜನೆಯ ಭಾಗವಾಗಿ ಈ ವಿಲೀನ ನಡೆದಿದೆ ಎಂದು ಸ್ಕೋಡಾ ಆಟೊದ ಸಿಇಒ ಬರ್ನಾರ್ಡ್‌ ಮೇರ್‌ ತಿಳಿಸಿದ್ದಾರೆ.

2020ರಲ್ಲಿ ಭಾರತದ ಮಾರುಕಟ್ಟೆಗೆ ಮಧ್ಯಮ ಗಾತ್ರದ ಮೊದಲ ಎಸ್‌ಯುವಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. 2025ರ ವೇಳೆಗೆ ಫೋಕ್ಸ್‌ವ್ಯಾಗನ್‌ ಮತ್ತು ಸ್ಕೋಡಾದ ಮಾರುಕಟ್ಟೆ ಷೇರು ಹೆಚ್ಚಿಸಿಕೊಳ್ಳವ ಉದ್ದೇಶದಿಂದ ಈ ವಿಲೀನವು ಉತ್ತಮ ಅವಕಾಶಗಳನ್ನು ತೆರೆದಿಟ್ಟಿದೆ. ತಂತ್ರಜ್ಞಾನ ಮತ್ತು ಆಡಳಿತ ಮಂಡಳಿ ಮಟ್ಟದಲ್ಲಿ ಇರುವ ಪರಿಣತರನ್ನು ಬಳಸಿಕೊಂಡು ಮಾರುಕಟ್ಟೆಯ ಸವಾಲು ಮತ್ತು ಸ್ಪರ್ಧಾತ್ಮಕತೆಯನ್ನು ಎದುರಿಸಲಾಗುವುದು ಎಂದು ಹೇಳಿದ್ದಾರೆ.

Post Comments (+)