ಭವಿಷ್ಯದ ಬೇಡಿಕೆ ‘ವೈರ್‌ಲೆಸ್ ಚಾರ್ಜರ್‌’

7

ಭವಿಷ್ಯದ ಬೇಡಿಕೆ ‘ವೈರ್‌ಲೆಸ್ ಚಾರ್ಜರ್‌’

Published:
Updated:
Deccan Herald

ಸ್ಮಾರ್ಟ್‌ಫೋನ್‌ಗಳ ಗಾತ್ರ ದಿನೇ ದಿನೇ ದೊಡ್ಡದಾಗುತ್ತಿದೆ. ಅದರೊಂದಿಗೆ ಗ್ಲಾಸ್‌ನಿಂದಲೇ ಅವುಗಳ ಹೊರ ಕವಚ ನಿರ್ಮಾಣವಾಗುತ್ತಿದೆ. ಅದು ಮುಂಭಾಗ ಮತ್ತು ಹಿಂಭಾಗ ಆಗಿರಬಹುದು. ಇವುಗಳನ್ನು ಬಳಸಲೂ ಅಷ್ಟೇ ಜಾಗರೂಕತೆ ಬೇಕು. ಕೆಳಗೆ ಬಿದ್ದು ಒಡೆದು ಹೋದರೆ ಮತ್ತೆ ಹೊಸದನ್ನೇ ಖರೀದಿ ಮಾಡಬೇಕಾಗುತ್ತದೆ. ಗಾಜಿನಿಂದ ತಯಾರಾದ ಮೊಬೈಲ್‌ಗಳು ಬೇಗ ಚಾರ್ಜ್‌ ಆಗುತ್ತವೆ. ಅದೂ ವೈರ್‌ಲೆಸ್ ಆಗಿ. ಮ್ಯಾಗ್ನೆಟಿಕ್ ತಂತ್ರಜ್ಞಾನವನ್ನು ಬಳಸುವ ಇವು ವೈರ್‌ ಇಲ್ಲದೆ ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಸಾಕಷ್ಟು ಜನರು ವೈರ್ ಇಲ್ಲದೆ ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ‘ಸರ್ವೆ ಮಂಕಿ’ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ವೈರ್‌ಲೆಸ್‌ (ನಿಸ್ತಂತು) ಚಾರ್ಜಿಂಗ್‌ ಭವಿಷ್ಯದ ಮೆಚ್ಚಿನ ತಂತ್ರಜ್ಞಾನವಾಗುವುದರಲ್ಲಿದೆ. ‘ಐಎಚ್ಎಸ್’  ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಕೇವಲ ಶೇ 29 ರಷ್ಟು ಮಂದಿ ಮಾತ್ರವೇ ಕಳೆದ ವರ್ಷ ವೈರ್‌ಲೆಸ್ ಚಾರ್ಜರ್‌ ಬಳಸಿದ್ದರು.

ವೈರ್‌ಲೆಸ್ ಚಾರ್ಜರ್‌ಗೆ ಅವುಗಳದ್ದೇ ಆದ ಅಕ್ಸೆಸರೀಸ್‌ಗಳು ಬೇಕು. ಸ್ಯಾಮ್ಸಂಗ್, ಮೋಫಿಯಾ ಮತ್ತು ಅಂಕೇರ್ ಮುಂತಾದ ಕಂಪನಿಗಳು ಇವುಗಳನ್ನು ತಯಾರಿಸುತ್ತಿವೆ. ಫೋನ್‌ಗಳನ್ನು ವೈರ್‌ಲೆಸ್ ಚಾರ್ಜರ್‌ಗೆ ಸೆಟ್ ಮಾಡಿ ಇಟ್ಟರಾಯಿತು.

ಹಾಗೆಂದ ಮಾತ್ರಕ್ಕೆ ವೈರ್‌ಲೆಸ್‌ ಚಾರ್ಜರ್‌ ಎಲ್ಲಾ ರೀತಿಯಲ್ಲಿ ಹೆಚ್ಚು ದಕ್ಷತೆಯಿಂದ ಕೂಡಿದೆ ಎಂದೂ ಅರ್ಥವಲ್ಲ. ಇಲ್ಲೂ ಪರ– ವಿರೋಧದ ಅಭಿಪ್ರಾಯಗಳಿವೆ. ಶಕ್ತಿಯನ್ನು ವರ್ಗಾಯಿಸುವಲ್ಲಿ ವೈರ್‌ಗಿಂತ ವೈರ್‌ಲೆಸ್ ಚಾರ್ಜರ್‌ ಕಡಿಮೆ ದಕ್ಷತೆ ಹೊಂದಿದೆ ಮತ್ತು  ನಿಧಾನವಾಗಿ ಚಾರ್ಜ್‌ ಆಗುತ್ತದೆ ಎಂಬ ದೂರಿದೆ. ಮೋಫಿಯಾ ಕಂಪನಿಯ ಪ್ರಕಾರ,  ಒಂದೇ ರೀತಿಯ ವಾಟ್‌ನಲ್ಲಿ ಎರಡೂ ರೀತಿಯ ಚಾರ್ಜರ್‌ಗಳನ್ನು ಹಾಕಿದರೆ ವೈರ್‌ಲೆಸ್‌ ಶೇ 15 ರಷ್ಟು ನಿಧಾನವಾಗಿ ಚಾರ್ಜ್‌ ಆಗುತ್ತದೆ.

‘ಜನ ಸಾಕಷ್ಟು ಸಮಯ ಕಳೆಯುವ ಸ್ಥಳಗಳಾದ ಬೆಡ್‌ರೂಂ, ಕಾರು ಮತ್ತು ಕಚೇರಿಗಳಲ್ಲಿ ವೈರ್‌ಲೆಸ್ ಚಾರ್ಜರ್‌ಗಳನ್ನು ಇಟ್ಟುಕೊಂಡರೆ ಫೋನ್‌ ಅದರಷ್ಟಕ್ಕೆ ಚಾರ್ಜ್‌ ಆಗುತ್ತದೆ. ಇದರಿಂದ ಪ್ಲಗ್‌ಗಳಿಗೆ ಚಾರ್ಜರ್‌ಗಳನ್ನು ಸಿಲುಕಿಸಬೇಕಾದ ಕಿರಿಕಿರಿ ಇರುವುದಿಲ್ಲ’ ಎನ್ನುತ್ತಾರೆ ಮೊಫೀಯಾ ಕಂಪನಿಯ ಉತ್ಪನ್ನ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಚಾರ್ಲಿ ಕ್ವಾಂಗ್‌.

ಮಲಗುವ ಕೋಣೆಗಳಲ್ಲಿ
ಬೆಡ್‌ಸೈಡ್ ಟೇಬಲ್‌ಗಳ ಮೇಲೆ ಎರಡು ರೀತಿಯ ವೈರ್‌ಲೆಸ್ ಚಾರ್ಜರ್‌ಗಳನ್ನು ಇಟ್ಟುಕೊಳ್ಳಬಹುದು. ಅವುಗಳೆಂದರೆ ಪಾಡ್ಸ್‌ ಮತ್ತು ಸ್ಟ್ಯಾಂಡ್ಸ್‌. ಪಾಡ್‌, ಡಿಸ್ಕ್‌ ರೀತಿಯಲ್ಲಿದ್ದು, ಅದರ ಮೇಲೆ ಫೋನ್ ಇಡಬಹುದು. ಸ್ಟ್ಯಾಂಡ್ಸ್ ನಿಲ್ಲಿಸಿಕೊಂಡ ರೀತಿಯಲ್ಲಿದ್ದು, ಮೊಬೈಲ್‌ ನಮಗೆದುರಾಗಿರುವಂತೆ ಇಟ್ಟುಕೊಳ್ಳಬಹುದು. ಮೋಫಿಯಾ ಚಾರ್ಜರ್‌ ಪಾಡ್ಸ್‌ ಮತ್ತು ಅಂಕೇರ್‌ ಕಂಪನಿ ಪವರ್ ವೇವ್‌ ಸ್ಟ್ಯಾಂಡ್‌ ಸೂಕ್ತವಾಗಿವೆ. ಫೋನ್‌ ಮಲಗಿರುವ ರೀತಿಯಲ್ಲಿರುವುದರಿಂದ ಪಾಡ್ಸ್‌ ಸಹ ಸೂಕ್ತವಾಗಿವೆ.

ಕಚೇರಿಗಳಲ್ಲಿ
ವೈರ್‌ಲೆಸ್ ಚಾರ್ಜರ್‌ಗಳನ್ನು ಕಚೇರಿಗಳ ಡೆಸ್ಕ್‌ ಮೇಲೆಯೂ ಇಟ್ಟುಕೊಳ್ಳಬಹುದು. ಹಲವು ಸಭೆಗಳ ನಡುವೆ ನಿಮ್ಮ ಫೋನ್ ಚಾರ್ಜ್ ಆಗಬೇಕಿದ್ದರೆ ನಿಧಾನವಾಗಿ ಚಾರ್ಜ್‌ ಆಗುತ್ತಿದ್ದರೆ ಅದರಿಂದ ಹೆಚ್ಚಿನ ಅನುಕೂಲವಾಗುವುದಿಲ್ಲ. ಒಂದು ಪರೀಕ್ಷೆ ಪ್ರಕಾರ, ಆ್ಯಂಕರ್ ಕಂಪನಿಯ ವೈರ್‌ಲೆಸ್ ಚಾರ್ಜರ್‌ ಶೇ 25 ರಷ್ಟು ಬ್ಯಾಟರಿ ಚಾರ್ಜ್ ಆಗಲು 10 ನಿಮಿಷ ತೆಗೆದುಕೊಂಡಿತು. ಇದು ವೈರ್‌ ಚಾರ್ಜರ್‌ಗಿಂತ ಹೆಚ್ಚು ದಕ್ಷತೆ ಹೊಂದಿದೆ. ಕಚೇರಿಗಳಿಂದ ಹೊರಗೆ ಹೋಗಬೇಕಿದ್ದರೆ ಮೊಫಿಯಾ ಕಂಪನಿ ಆಯತಾಕಾರದ ಬ್ಯಾಟರಿ ಪ್ಯಾಕ್ ಸಲಹೆ ನೀಡಿದೆ. ಇದರ ಬ್ಯಾಟರಿ ಪ್ಯಾಕ್‌ ಮೇಲೆ ಮೊಬೈಲ್ ಇಟ್ಟರಾಯಿತು. ಇದು ಕೆಲವು ಸಂದರ್ಭಗಳಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.

ಲಿವಿಂಗ್ ರೂಂನಲ್ಲಿ
ಟಿ.ವಿ ಸ್ಟ್ಯಾಂಡ್ ಮೇಲೆ ವೈರ್‌ಲೆಸ್ ಚಾರ್ಜರ್‌ ಅನ್ನು ಇಟ್ಟುಕೊಳ್ಳಬಹುದು. ಆದರೆ, ಇಲ್ಲಿ ಹೆಚ್ಚು ಪ್ರಯೋಜನಕ್ಕೆ ಬಾರದು. ಆಗ ವೈರ್‌ ಚಾರ್ಜರ್ ಹೆಚ್ಚು ಸೂಕ್ತವಾಗುತ್ತದೆ. ಮೊಬೈಲ್ ಅನ್ನು ಕಾಪಾಡಿಕೊಳ್ಳುವ ಕಡೆಗೂ ಗಮನ ಹರಿಸಬೇಕಿದೆ.

 ಕಾರಿನಲ್ಲಿ
ಕಾರುಗಳಲ್ಲಿನ ಏರ್‌ಕಂಡೀಷನ್ ವೆಂಟ್‌ ಇಲ್ಲವೇ ಸಿ.ಡಿ ಪ್ಲೇಯರ್ ಸ್ಲಾಟ್‌ಗಳಲ್ಲಿ ವೈರ್‌ಲೆಸ್ ಚಾರ್ಜರ್ ಅಳವಡಿಸಬಹುದು. ಮೋಫಿಯಾದ ಮೌಂಟ್ ಅನ್ನು ಏರ್ ವೆಂಟ್‌ನಲ್ಲಿ ಇಟ್ಟುಕೊಳ್ಳಬಹುದು. ಫೋನ್ ಅನ್ನು ಇಡುವುದಲ್ಲದೆ ಅದನ್ನು ಬೇಕಾದ ಹಾಗೆ ಬೇರೆ ಬೇರೆ ದಿಕ್ಕಿಗೆ ತಿರುಗಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !