ಮನೆಯ ಬೆಡ್ ರೂಂ ಅಥವಾ ಡೈನಿಂಗ್ ಪ್ರದೇಶದಲ್ಲಿ ಬಳಸುವ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿಯಿದೆ. ₹10 ಸಾವಿರ ಹಾಗೂ ಅದಕ್ಕೂ ಮೇಲ್ಪಟ್ಟ ಬೆಲೆಯ ವಸ್ತುಗಳನ್ನು ಖರೀದಿಸಿದವರಿಗೆ ₹1,500 ಮೌಲ್ಯದ ವೋಚರ್ ಸಿಗಲಿದೆ. ಹಬ್ಬದ ಋತು ಮುಗಿದ ಬಳಿಕವೂ ಈ ವೋಚರ್ ಮೂಲಕ ಖರೀದಿಯ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದೆ.