ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಮಾಟೊ ಆಹಾರ ಆರ್ಡರ್‌ ಇನ್ನು ದುಬಾರಿ!

Published 22 ಏಪ್ರಿಲ್ 2024, 13:33 IST
Last Updated 22 ಏಪ್ರಿಲ್ 2024, 13:33 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಕಂಪನಿಯು ತನ್ನ ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್‌ ಫೀ) ₹4ರಿಂದ ₹5ಕ್ಕೆ ಹೆಚ್ಚಿಸಿದೆ. 

ನವದೆಹಲಿ, ಬೆಂಗಳೂರು, ಮುಂಬೈ ಹಾಗೂ ಹೈದರಾಬಾದ್‌ ಸೇರಿ ಪ್ರಮುಖ ನಗರಗಳಲ್ಲಿ ಈ ಶುಲ್ಕ ಏರಿಕೆಯು ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಪ್ರಮುಖ ನಗರಗಳ ಪ್ರಸಿದ್ಧ ರೆಸ್ಟೋರೆಂಟ್‌ಗಳಿಂದ ಇತರೆ ನಗರಗಳಿಗೆ ಆಹಾರ ಪೂರೈಸುತ್ತಿದ್ದ ‘ಇಂಟರ್‌ಸಿಟಿ ಲೆಜೆಂಡ್ಸ್’ ಸೇವೆಯನ್ನು ರದ್ದುಪಡಿಸಿದೆ.

2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸುವುದಕ್ಕೂ ಮೊದಲೇ ಶುಲ್ಕ ಹೆಚ್ಚಿಸಿದೆ. 

‘ಕಂಪನಿಯ ಲಾಭ ಮತ್ತು ವರಮಾನ ಹೆಚ್ಚಳಕ್ಕಾಗಿ ಕಾಲಕಾಲಕ್ಕೆ ಇಂತಹ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ’ ಎಂದು ಜೊಮಾಟೊ ವಕ್ತಾರರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಕಳೆದ ವರ್ಷದ ಆಗಸ್ಟ್‌ನಲ್ಲಿ ಕಂಪನಿಯು ಪ್ಲಾಟ್‌ಫಾರ್ಮ್‌ ಶುಲ್ಕವನ್ನು ಜಾರಿಗೊಳಿಸಿತ್ತು. ಆರಂಭದಲ್ಲಿ ₹2 ನಿಗದಿಪಡಿಸಿತ್ತು. ನಂತರ ಇದನ್ನು ಹಂತ ಹಂತವಾಗಿ ಏರಿಕೆ ಮಾಡಿದೆ. ಪ್ರತಿಸ್ಪರ್ಧಿಯಾದ ಸ್ವಿಗ್ಗಿ ಕಂಪನಿಯು ₹5 ಪ್ಲಾಟ್‌ಫಾರ್ಮ್‌ ಶುಲ್ಕ ವಿಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT