ಹಣಕಾಸು ಸಂಸ್ಥೆಗಳು ನೀಡುವ ಕ್ರೆಡಿಟ್ ಕಾರ್ಡ್ಗಳು ಬಳಕೆದಾರರಿಗೆ ಆರ್ಥಿಕ ಅನುಕೂಲ ಕಲ್ಪಿಸುವುದಲ್ಲದೆ, ಅಗತ್ಯ ಸಂದರ್ಭಗಳಲ್ಲಿ ಹಣಕಾಸಿನ ಭದ್ರತೆ ನೀಡುತ್ತವೆ. ಜೊತೆಗೆ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ. ರಿವಾರ್ಡ್ ಪಾಯಿಂಟ್ಗಳು, ಕ್ಯಾಶ್ಬ್ಯಾಕ್, ಪ್ರಯಾಣದ ಪ್ರಯೋಜನಗಳ ಜೊತೆಗೆ ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಿಸಲು ಬಳಕೆದಾರರಿಗೆ ಸಹಾಯ ಮಾಡುತ್ತವೆ.

2024–25ರ ಆರ್ಥಿಕ ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಗೆ ಸಂಬಂಧಿಸಿದಂತೆ 50,811 ದೂರುಗಳು ದಾಖಲಾಗಿವೆ. 2023–24ಕ್ಕೆ ಹೋಲಿಸಿದರೆ ದೂರುಗಳ ಸಂಖ್ಯೆಯಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಖಾಸಗಿ ಬ್ಯಾಂಕ್ಗಳು ನೀಡಿದ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ದೂರುಗಳು ಅಧಿಕ ಎಂದು ಆರ್ಬಿಐ ಒಂಬುಡ್ಸ್ಮನ್ ವರದಿ ತಿಳಿಸಿದೆ.

ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಕ್ರೆಡಿಟ್ ಕಾರ್ಡ್ ಹೊಂದಬಹುದು. ಕ್ರೆಡಿಟ್ ಕಾರ್ಡ್ಗಳಿಂದ ಅನುಕೂಲ ಇರುವಷ್ಟೇ, ಆ ಕಾರ್ಡ್ ಸರಿಯಾಗಿ ಬಳಕೆ ಮಾಡಿಕೊಳ್ಳದಿದ್ದರೆ ಅಷ್ಟೇ ಸಮಸ್ಯೆ ಇದೆ. ಕ್ರೆಡಿಟ್ ಕಾರ್ಡ್ ಸೂಕ್ತ ಬಳಕೆಯಿಂದ ಆಗುವ ಪ್ರಯೋಜನ ಮತ್ತು ಅದನ್ನು ಅತಿಯಾಗಿ ಬಳಸುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿಯುವುದು ಅಗತ್ಯ.

ಕ್ರೆಡಿಟ್ ಕಾರ್ಡ್ ಅನುಕೂಲ...

* ಕ್ರೆಡಿಟ್ ಕಾರ್ಡ್ ವ್ಯಕ್ತಿಯ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

* ಕೈಯಲ್ಲಿ ಹಣವಿಲ್ಲದಿದ್ದರೂ, ಕಾರ್ಡ್ ಬಳಸಿ ಹಣ ಪಡೆದುಕೊಳ್ಳಬಹುದು

* ಕ್ರೆಡಿಟ್ ಕಾರ್ಡ್ನ ಸರಿಯಾದ ಬಳಕೆಯು ಕ್ರೆಡಿಟ್ ಅಂಕವನ್ನು ಸುಧಾರಿಸುತ್ತದೆ

* ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದಾಗ ರಿವಾರ್ಡ್ ಪಾಯಿಂಟ್ಗಳು ಲಭಿಸುತ್ತವೆ. ಮತ್ತೊಮ್ಮೆ ಕಾರ್ಡ್ ಬಳಸುವಾಗ ಈ ಪಾಯಿಂಟ್ಸ್ ಬಳಸಿ, ಹಣ ಉಳಿಸಬಹುದು.

* ಕ್ರೆಡಿಟ್ ಕಾರ್ಡ್ ಬಳಸಿ ಯಾವುದಾದರೂ ವಸ್ತು ಖರೀದಿಸಿದರೆ, ಖರೀದಿಸಿದ ದಿನದಿಂದ ಬಿಲ್ ಪಾವತಿ ಮಾಡಲು 45 ದಿನದವರೆಗೆ ಅವಕಾಶ ಸಿಗುತ್ತದೆ

ಬಳಸುವಾಗ ಎಚ್ಚರಿಕೆ...

* ಸೂಕ್ತವಾಗಿ ಕ್ರೆಡಿಟ್ ಕಾರ್ಡ್ಗಳನ್ನು ಬಳಸದಿದ್ದರೆ ಸಾಲದ ಕೂಪಕ್ಕೆ ಸಿಲುಕಬಹುದು

* ಕಾರ್ಡ್ಗಳು ವಿಧಿಸುವ ವಾರ್ಷಿಕ ಶುಲ್ಕ, ಬಡ್ಡಿ, ದಂಡ ಪಾವತಿ ಹೆಚ್ಚಿರುತ್ತದೆ

* ಸಮಯಕ್ಕೆ ಸರಿಯಾಗಿ ಬಿಲ್ ಮೊತ್ತ ಪಾವತಿಸದಿದ್ದರೆ ಹೆಚ್ಚಿನ ಸಾಲದ ಹೊರೆ ಬೀಳುತ್ತದೆ

* ಕ್ರೆಡಿಟ್ ಕಾರ್ಡ್ ಬಳಸಿ ನಗದು ಹಣ ಪಡೆಯುವುದು ಹೆಚ್ಚು ವೆಚ್ಚದಾಯಕ

* ಕ್ರೆಡಿಟ್ ಕಾರ್ಡ್ಗಳ ಅಧಿಕ ಬಳಕೆಯಿಂದ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ

ಆಧಾರ: ಎಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಗೋಕ್ವಿಕ್, ಟ್ರೇಡ್ ಬ್ರೈನ್ಸ್ ವೆಬ್ಸೈಟ್ಗಳು, ಆರ್ಬಿಐ ಒಂಬುಡ್ಸ್ಮನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.