ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಲ್ವೇಸ್‌ನ ಹೊಸ ನಿಧಿ ಕೊಡುಗೆ;ಹೂಡಿಕೆಗೆ ಇಂದು ಕೊನೆಯ ದಿನ

Last Updated 16 ಮಾರ್ಚ್ 2021, 3:19 IST
ಅಕ್ಷರ ಗಾತ್ರ

ಬೆಂಗಳೂರು: ಸಂಪತ್ತು ನಿರ್ವಹಣಾ ಕಂಪನಿ (ಎಎಂಸಿ) ಎಡಲ್ವೇಸ್‌ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯು, ಎಡಲ್ವೇಜ್‌ ನಿಫ್ಟಿ ಪಿಎಸ್‌ಯು ಬಾಂಡ್‌ ಪ್ಲಸ್ ಎಸ್‌ಡಿಎಲ್‌ ಇಂಡೆಕ್ಸ್‌ ಫಂಡ್-2026 ಬಿಡುಗಡೆ ಮಾಡಿದೆ. ಈ ಹೊಸ ನಿಧಿ ಕೊಡುಗೆಯಲ್ಲಿನ (ಎನ್‌ಎಫ್‌ಒ) ಹೂಡಿಕೆಗೆ ಮಾರ್ಚ್‌ 16 ಕೊನೆಯ ದಿನವಾಗಿದೆ.

ಹೂಡಿಕೆಯ ಕನಿಷ್ಠ ಮಿತಿ ₹ 5,000 ರಷ್ಟು ಇದೆ. ಏಪ್ರಿಲ್ 30, 2026 ರಂದು ಈ ಫಂಡ್‌ ಖಚಿತವಾಗಿ ಫಲಪ್ರದವಾಗಲಿದೆ. ಫಂಡ್‌ ಮೆಚ್ಯುರಿಟಿ ಆದಾಗ ಹೂಡಿಕೆದಾರರಿಗೆ ಅವರ ಹೂಡಿಕೆ ಮೊತ್ತ ವಾಪಸು ಸಿಗುತ್ತದೆ.

‘ಹೆಚ್ಚು ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಈ ಇಂಡೆಕ್ಸ್‌ ಫಂಡ್ ಅತಿ ಕಡಿಮೆ ದರದಲ್ಲಿ ಒದಗಿಸಲಿದೆ. ನಮ್ಮ ಹೂಡಿಕೆದಾರರಿಗೆ ಇಂತಹ ನವೀನ ಮತ್ತು ಸರಳ ಪರಿಹಾರವನ್ನು ಒದಗಿಸಲು ನಾವು ಬದ್ಧವಾಗಿದ್ದೇವೆ. ಇತರ ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಇದು ಹೆಚ್ಚು ತೆರಿಗೆ ಪ್ರಯೋಜನಕಾರಿಯಾಗಿದೆ’ ಎಂದು ಎಡಲ್ವೇಸ್‌ ಮ್ಯೂಚುವಲ್‌ ಫಂಡ್‌ನ ಸಿಇಒ ರಾಧಿಕಾ ಗುಪ್ತಾ ಹೇಳಿದ್ದಾರೆ.

ಇದು ಓಪನ್‌ ಎಂಡ್‌, ಟಾರ್ಗೆಟ್‌ ಮೆಚ್ಯುರಿಟಿ ಇಂಡೆಕ್ಸ್‌ ಫಂಡ್‌ ಆಗಿದ್ದು, ನಿಫ್ಟಿ ಪಿಎಸ್‌ಯು ಬಾಂಡ್‌ ಪ್ಲಸ್ ಎಸ್‌ಡಿಎಲ್‌ 50:50 ಇಂಡೆಕ್ಸ್‌ನಲ್ಲಿ ಹೂಡಿಕೆ ಮಾಡಲಿದೆ. ಕಂಪನಿಯ ಬಾಂಡ್‌ಗಳಲ್ಲಿ ಹೂಡಿಕೆಯ ಮಿತಿಯನ್ನು ಬಂಡವಾಳದ ಶೇ 15 ಕ್ಕೆ ಮಿತಿಗೊಳಿಸಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT