ಮನಿಲಾ: ಫಿಲಿಪ್ಪೀನ್ಸ್ ಅಧ್ಯಕ್ಷ ರೋಡ್ರಿಗೊ ಡುಟರ್ಟ್ ಅವರು ದಕ್ಷಿಣ ಕೊರಿಯಾ ಭೇಟಿ ವೇಳೆ, ವೇದಿಕೆ ಮೇಲೆ ಮಹಿಳೆಯೊಬ್ಬರನ್ನು ಚುಂಬಿಸಿದ್ದಕ್ಕೆ ಪ್ರತಿಭಟನೆ ವ್ಯಕ್ತವಾಗಿದೆ. ಇದೊಂದು ಜುಗುಪ್ಸೆ ಹುಟ್ಟಿಸುವ ನಡವಳಿಕೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪ್ರೇಕ್ಷಕರ ಸ್ಥಳದಲ್ಲಿ ಕುಳಿತಿದ್ದ ಮಹಿಳೆಯನ್ನು ವೇದಿಕೆಗೆ ಕರೆದು ಆಕೆಯ ತುಟಿಯನ್ನು ಚುಂಬಿಸಿದ್ದ ಡುಟೆರ್ಟ್, ಈ ಅನುಭವವನ್ನು ತನ್ನ ಗಂಡನಿಗೆ ವಿವರಿಸುವಂತೆ ಆಕೆಗೆ ಸೂಚಿಸಿದ್ದರು. ‘ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿರು. ತಮಾಷೆಗಾಗಿ ಹೀಗೆ ಮಾಡಿದೆ. ಇದೊಂದು ಗಿಮಿಕ್ ಅಷ್ಟೆ’ ಎಂದು ಹೇಳಿದ್ದರು.
ಈ ಹಿಂದೆ, ಅತ್ಯಾಚಾರಕ್ಕೆ ಸಂಬಂಧಿಸಿದ ಜೋಕುಗಳು, ಮಹಿಳಾ ಗೆರಿಲ್ಲಾಗಳ ಗುಪ್ತಾಂಗದ ಮೇಲೆ ಗುಂಡು ಹಾರಿಸಬೇಕು ಎಂಬಂತಹ ಅವರ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು.