36 ಸಾವಿರ ಗಡಿ ದಾಟಿದ ಸೂಚ್ಯಂಕ

7
ದೇಶಿ ಹೂಡಿಕೆ, ಕಾರ್ಪೊರೇಟ್‌ ಗಳಿಕೆಯ ಪ್ರಭಾವ

36 ಸಾವಿರ ಗಡಿ ದಾಟಿದ ಸೂಚ್ಯಂಕ

Published:
Updated:

ಮುಂಬೈ: ದೇಶಿ ಸಾಂಸ್ಥಿಕ ಹೂಡಿಕೆಯ ಬೆಂಬಲ ಮತ್ತು ಕಾರ್ಪೊರೇಟ್ ಗಳಿಕೆಯ ನೆರವಿನಿಂದ ಸತತ ಮೂರನೇ ದಿನವೂ ಷೇರುಪೇಟೆ ಸೂಚ್ಯಂಕಗಳು ಏರಿಕೆ ದಾಖಲಿಸಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಮಂಗಳವಾರ 305 ಅಂಶ ಏರಿಕೆ ಕಂಡು 36 ಸಾವಿರದ ಗಡಿ ದಾಟಿತು. 36,239 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 95 ಅಂಶ ಹೆಚ್ಚಾಗಿ 10,947 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಆರೋಗ್ಯ ಸೇವೆಗಳ ವಲಯವನ್ನು ಬಿಟ್ಟು ಉಳಿದಂತೆ ಇಂಧನ, ರಿಯಲ್‌ ಎಸ್ಟೇಟ್‌ ಮತ್ತು ದೂರಸಂಪರ್ಕವನ್ನೂ ಒಳಗೊಂಡು ಎಲ್ಲಾ ವಲಯಗಳೂ ಉತ್ತಮ ಖರೀದಿಗೆ ಒಳಗಾದವು.

‘ಷೇರುಪೇಟೆಯು ಕಾರ್ಪೊರೇಟ್ ಫಲಿತಾಂಶಗಳ ಕಡೆಗೆ ಗಮನ ನೀಡಲಾರಂಭಿಸಿದೆ. ಹೀಗಾಗಿ ಐದ ತಿಂಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

‘ರೂಪಾಯಿ ಮೌಲ್ಯ ಇಳಿಕೆ ಮತ್ತು ಜೂನ್‌ ತಿಂಗಳ ಚಿಲ್ಲರೆ ಹಣದುಬ್ಬರದ ಏರಿಕೆ ನಿರೀಕ್ಷೆಯಿಂದ ಬಾಂಡ್‌ ಗಳಿಕೆ ಹೆಚ್ಚಳವು ಆತಂಕಕಾರಿ ಅಂಶಗಳಾಗಿವೆ’ ಎಂದೂ ಹೇಳಿದ್ದಾರೆ.

ಎಚ್‌ಡಿಎಫ್‌ಸಿ ಸಮೂಹದ​ ಬಂಡವಾಳ ವೃದ್ಧಿ

ಎಚ್‌ಡಿಎಫ್‌ಸಿ ಸಮೂಹದ ಮಾರುಕಟ್ಟೆ ಮೌಲ್ಯವು ₹ 10 ಲಕ್ಷ ಕೋಟಿ ಗಡಿ ದಾಟಿದೆ. ಟಾಟಾ ಸಮೂಹದ (ಸದ್ಯ ಮಾರುಕಟ್ಟೆ ಮೌಲ್ಯ ₹ 11 ಲಕ್ಷ ಕೋಟಿ) ನಂತರ ಮಾರುಕಟ್ಟೆ ಮೌಲ್ಯ ₹ 10 ಲಕ್ಷ ಕೋಟಿ ಗಡಿ ದಾಟಿದ ಎರಡನೇ ಸಂಸ್ಥೆ ಇದಾಗಿದೆ.

ಎಚ್‌ಡಿಎಫ್‌ಸಿ ಸಮೂಹವು ಎಚ್‌ಡಿಎಫ್‌ಸಿ ಲಿಮಿಟೆಡ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಡಿಎಫ್‌ಸಿ ಸ್ಟ್ಯಾಂಡರ್ಡ್‌ ಲೈಫ್‌ ಮತ್ತು ಎಚ್‌ಡಿಎಫ್‌ಸಿ ಗೃಹ ಫೈನಾನ್ಸ್ ಎಂಬ ನಾಲ್ಕು ಕಂಪನಿಗಳನ್ನು ಒಳಗೊಂಡಿದೆ. 

ಅಂಕಿ–ಅಂಶ

ವಹಿವಾಟಿನ ವಿವರ

* 667 ಅಂಶ ಮೂರು ವಹಿವಾಟು ಅವಧಿಗಳಲ್ಲಿ ಸೂಚ್ಯಂಕದ ಏರಿಕೆ

* ₹ 740 ಕೋಟಿ ಸೋಮವಾರ ದೇಶಿ ಸಾಂಸ್ಥಿಕ ಹೂಡಿಕೆ

* ₹ 570 ಕೋಟಿ ಸೋಮವಾರ ವಿದೇಶಿ ಬಂಡವಾಳ ಹೊರಹರಿವು

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !