ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ವಲಯದ ಷೇರುಗಳ ಉತ್ತಮ ಗಳಿಕೆ; ಮುಂಬೈ ಷೇರುಪೇಟೆ ಸೂಚ್ಯಂಕ 180 ಅಂಶ ಹೆಚ್ಚಳ

Last Updated 22 ಜೂನ್ 2020, 12:54 IST
ಅಕ್ಷರ ಗಾತ್ರ

ಮುಂಬೈ: ಹಣಕಾಸು ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳ ವಹಿವಾಟು ಸೋಮವಾರ ಸಕಾರಾತ್ಮಕವಾಗಿ ಅಂತ್ಯಗೊಂಡಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 482 ಅಂಶಗಳವರೆಗೂ ಏರಿಕೆ ಕಂಡಿತ್ತಾದರೂ ನಂತರ ಮಾರಾಟದ ಒತ್ತಡಕ್ಕೆ ಸಿಲುಕಿ ಏರಿಕೆ ಪ್ರಮಾಣ ತಗ್ಗಿತು. ಅಂತಿಮವಾಗಿ 180 ಅಂಶಗಳ ಹೆಚ್ಚಳದೊಂದಿಗೆ 34,911 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 67 ಅಂಶ ಹೆಚ್ಚಾಗಿ 10,311 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಬಜಾಜ್‌ ಆಟೊ ಷೇರು ಶೇ 7ರಷ್ಟು ಗರಿಷ್ಠ ಏರಿಕೆ ಕಂಡಿದೆ. ಬಜಾಜ್‌ ಫೈನಾನ್ಸ್, ಬಜಾಜ್‌ ಫಿನ್‌ಸರ್ವ್‌, ಕೋಟಕ್‌ ಬ್ಯಾಂಕ್‌, ಪವರ್ ಗ್ರಿಡ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳೂ ಗಳಿಕೆ ಕಂಡಿವೆ.

ಒಎನ್‌ಜಿಸಿ, ಎಚ್‌ಡಿಎಫ್‌ಸಿ, ಟಿಸಿಎಸ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಮೌಲ್ಯ ಇಳಿಕೆಯಾಗಿದೆ.

‘ಮಧ್ಯಾಹ್ನದ ಬಳಿಕ ವಹಿವಾಟು ಸ್ಥಿರತೆ ಹಾದಿಗೆ ಮರಳಿತು. ಬ್ಯಾಂಕ್‌, ಹಣಕಾಸು ಸೇವೆಗಳು, ಲೋಹ ಮತ್ತು ಮಧ್ಯಮ ಶ್ರೇಣಿಯ ಷೇರುಗಳು ಉತ್ತಮ ಖರೀದಿಗೆ ಒಳಗಾದವು’ ಎಂದು ಆನಂದ ರಥಿ ಕಂಪನಿಯ ಸಂಶೋಧನಾ ಮುಖ್ಯಸ್ಥ ನರೇಂದ್ರ ಸೋಲಂಕಿ ತಿಳಿಸಿದ್ದಾರೆ.

'ಜೂನ್‌ನಲ್ಲಿ ಇದುವರೆಗೆ ನಗದು ಹರಿವು ಸಕಾರಾತ್ಮಕ ಮಟ್ಟದಲ್ಲಿದೆ. ವಿದೇಶ ಬಂಡವಾಳ ಹೂಡಿಕೆದಾರರು ₹ 17,985 ಕೋಟಿ ಹೂಡಿಕೆ ಮಾಡಿದ್ದಾರೆ’ ಎಂದೂ ಹೇಳಿದ್ದಾರೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದರಿಂದ ಷೇರುಪೇಟೆಯ ವಹಿವಾಟು ಚಂಚಲವಾಗಿದೆ.

ಏಷ್ಯಾದಲ್ಲಿ ಬಹುತೇಕ ಷೇರುಪೇಟೆಗಳು ನಕಾರಾತ್ಮಕವಾಗಿ ವಹಿವಾಟು ಅಂತ್ಯಗೊಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT