ಹೊಸ ಎತ್ತರಕ್ಕೆ ಷೇರುಪೇಟೆ

7
ಬಿಎಸ್‌ಇ 36,548 ನಿಫ್ಟಿ 11 ಸಾವಿರದ ಗಡಿ ದಾಟಿದ ನಿಫ್ಟಿ

ಹೊಸ ಎತ್ತರಕ್ಕೆ ಷೇರುಪೇಟೆ

Published:
Updated:

ಮುಂಬೈ: ದೇಶಿ ಹೂಡಿಕೆಯ ಬೆಂಬಲ ಮತ್ತು ರೂಪಾಯಿ ಮೌಲ್ಯ ವರ್ಧನೆಯಿಂದ ದೇಶದ ಷೇರುಪೇಟೆಗಳು ಗುರುವಾರದ ವಹಿವಾಟಿನಲ್ಲಿ ಹೊಸ ಎತ್ತರಕ್ಕೆ ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 283 ಅಂಶ ಏರಿಕೆ ಕಂಡು 36,548 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

2018ರ ಜನವರಿ 29 ರ ನಂತರ ವಹಿವಾಟಿನ ಗರಿಷ್ಠ ಅಂತ್ಯ ಇದಾಗಿದೆ. 

ದಿನದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 36,699ಕ್ಕೆ ತಲುಪಿತ್ತು. ನಂತರ ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾಗಿ ಏರಿಕೆಗೆ ಕಡಿವಾಣ ಬಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 11 ಸಾವಿರದ ಗಡಿ ದಾಟಿತು. ಒಟ್ಟಾರೆ 75 ಅಂಶ ಏರಿಕೆಯೊಂದಿಗೆ 11,023 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. 2018ರ ಜನವರಿ 31 ರಂದು 11,027ಕ್ಕೆ ತಲುಪಿತ್ತು.

ದೇಶಿ, ವಿದೇಶಿ ಹೂಡಿಕೆ, ರೂಪಾಯಿ ಮೌಲ್ಯ ವೃದ್ಧಿ ಹಾಗೂ ತ್ರೈಮಾಸಿಕ ಫಲಿತಾಂಶದ ಆರಂಭ ಸಕಾರಾತ್ಮಕವಾಗಿರುವುದು ಉತ್ತಮ ಚುಟವಟಿಕೆಗೆ ನೆರವಾಯಿತು ಎಂದು ದಲ್ಲಾಳಿಗಳು ಹೇಳಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಶೇ 4.42 ರಷ್ಟು ಹೆಚ್ಚಾಗಿ ಒಂದು ಷೇರಿನ ಬೆಲೆ ₹ 1,082ರಂತೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಯಿತು. ಇದರಿಂದ ಬಂಡವಾಳ ಮೌಲ್ಯ ₹ 6.85 ಲಕ್ಷ ಕೋಟಿಗೆ ತಲುಪಿತು.

ವಹಿವಾಟಿನ ವಿವರ

* 974 ಅಂಶ ಐದು ವಹಿವಾಟು ಅವಧಿಗಳಲ್ಲಿ ಸೂಚ್ಯಂಕದ ಏರಿಕೆ

* ₹ 636 ಕೋಟಿ ಬುಧವಾರ ವಿದೇಶಿ ಬಂಡವಾಳ ಹೂಡಿಕೆ

* ₹ 15 ಕೋಟಿ ಬುಧವಾರ ದೇಶಿ ಸಾಂಸ್ಥಿಕ ಹೂಡಿಕೆ

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !