ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ 508 ಅಂಶ ಏರಿಕೆ

Last Updated 26 ಏಪ್ರಿಲ್ 2021, 16:19 IST
ಅಕ್ಷರ ಗಾತ್ರ

ಮುಂಬೈ: ಹೊಸ ವಾರದ ಮೊದಲ ದಿನದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 508 ಅಂಶ ಏರಿಕೆ ಕಂಡಿತು. ದೇಶದಲ್ಲಿ ಕೋವಿಡ್–19 ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿದ್ದರೂ ಹೂಡಿಕೆದಾರರು ಬ್ಯಾಂಕಿಂಗ್, ಇಂಧನ ವಲಯದ ಷೇರುಗಳ ಖರೀದಿಯಲ್ಲಿ ತೊಡಗಿದ್ದರು.

ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 28 ಪೈಸೆಯಷ್ಟು ಹೆಚ್ಚಳ ಕಂಡಿದ್ದು ಕೂಡ ಷೇರುಪೇಟೆ ಸೂಚ್ಯಂಕಗಳ ಏರಿಕೆಗೆ ನೆರವಾಯಿತು ಎಂದು ವರ್ತಕರು ಹೇಳಿದ್ದಾರೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕವಾದ ನಿಫ್ಟಿ 143 ಅಂಶ ಏರಿಕೆ ಕಂಡಿತು.

ಎಕ್ಸಿಸ್‌ ಬ್ಯಾಂಕ್‌ ಷೇರುಗಳು ಅತಿಹೆಚ್ಚಿನ ಗಳಿಕೆ ಕಂಡುಕೊಂಡವು. ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್‌ ಸಿಮೆಂಟ್, ಎಸ್‌ಬಿಐ, ಎಚ್‌ಯುಎಲ್‌, ಪವರ್‌ಗ್ರಿಡ್, ಬಜಾಜ್ ಆಟೊ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಕೂಡ ಏರಿಕೆ ಕಂಡವು. ಎಚ್‌ಸಿಎಲ್‌ ಟೆಕ್ನಾಲಜೀಸ್, ಎಚ್‌ಡಿಎಫ್‌ಸಿ ಬ್ಯಾಂಕ್‌, ಮಾರುತಿ, ಸನ್ ಫಾರ್ಮಾ, ಟಿಸಿಎಸ್, ಎನ್‌ಟಿಪಿಸಿ, ಐಟಿಸಿ ಷೇರುಗಳು ಇಳಿಕೆ ಕಂಡವು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇಕಡ 1.74ರಷ್ಟು ಕಡಿಮೆ ಆಗಿ, ಬ್ಯಾರೆಲ್‌ಗೆ 64.28 ಡಾಲರ್‌ನಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT