ಬೆಂಗಳೂರು: ಎಲ್ಲ ಕ್ಷೇತ್ರದ ಗ್ರಾಹಕರಿಗೆ ಅನುಕೂಲವಾಗುವಂತಹ ಮುಂದಿನ ಪೀಳಿಗೆಯ ಸುಧಾರಿತ ಸರ್ವರ್ರನ್ನು ಡೆಲ್ ಇಎಂಸಿ ಬಿಡುಗಡೆ ಮಾಡಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ನೆರವಾಗಬಲ್ಲ ಸರ್ವರ್ ಇದಾಗಿದ್ದು, ಗ್ರಾಹಕರ ಕೆಲಸಗಳನ್ನು ಸುಲಭವಾಗಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
‘ಹೊಸ ಪೀಳಿಗೆಯ ಸರ್ವರ್, ದತ್ತಾಂಶ ಕೇಂದ್ರಗಳಿಗೆ ಹೆಚ್ಚು ಉಪಯೋಗವಾಗಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇನ್ನಷ್ಟು ಸುಧಾರಣೆ ಕಾಣಲಿದೆ’ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಜಾನೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಇದನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಗ್ರಾಹಕರ ಅನುಕೂಲಕ್ಕಾಗಿ ಸ್ವಯಂಚಾಲಿತ ವ್ಯವಸ್ಥೆ ಮತ್ತು ಹೆಚ್ಚು ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ’ ಎಂದರು.
‘ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ದತ್ತಾಂಶ ಕೇಂದ್ರಗಳು ಉತ್ತಮ ಸೇವೆ ಒದಗಿಸುವುದಕ್ಕಾಗಿ ಸುಧಾರಿತ ತಂತ್ರಜ್ಞಾನ ಅನಿವಾರ್ಯ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು 14ನೇ ಪೀಳಿಗೆಯ ಸರ್ವರ್ ಅನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಸಂಸ್ಥೆಯ ಹಿರಿಯ ನಿರ್ದೇಶಕ ಮನೀಷ್ ಗುಪ್ತ ತಿಳಿಸಿದರು.