ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮಾರುಕಟ್ಟೆಗೆ ಟಾಟಾ ಹೆಕ್ಸಾ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಮೋಟಾರ್ಸ್ ನ ಬಹು ನಿರೀಕ್ಷಿತ  ‘ಹೆಕ್ಸಾ’ ಎಸ್‌ಯುವಿ ವಾಹನ ಗುರುವಾರ ಕರ್ನಾಟಕದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.  ಆಧುನಿಕ ಜೀವನ ಶೈಲಿಗೆ ಹೊಂದುವಂತಹ ಆಕರ್ಷಕ ಹೊರ ಮತ್ತು ಒಳಾಂಗಣ ವಿನ್ಯಾಸ ಸೇರಿದಂತೆ ಹಲವಾರು ವೈಶಿಷ್ಟ್ಯ ಹೊಂದಿರುವ ಐಷಾರಾಮಿ  ಕಾರು ಮೊದಲ ನೋಟದಲ್ಲಿಯೇ  ಮನ ಸೆಳೆಯುತ್ತದೆ.

‘ಹೊಸತನಕ್ಕಾಗಿ ತುಡಿಯುವ ಕಾರು ಪ್ರಿಯರಿಗೆ ಹೇಳಿ ಮಾಡಿಸಿದ ‘ಲೈಫ್‌ಸ್ಟೈಲ್‌ ವೆಹಿಕಲ್‌’ ಇದಾಗಿದೆ’ ಎಂದು ಟಾಟಾ ಮೋಟಾರ್ಸ್‌ ವಿನ್ಯಾಸ ವಿಭಾಗದ ಮುಖ್ಯಸ್ಥ ಪ್ರತಾಪ್‌ ಬೋಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹೊಸ ಇಂಪ್ಯಾಕ್ಟ್‌ ಡಿಸೈನ್‌ ತತ್ವದ ಆಧಾರದಲ್ಲಿ ಗ್ರಾಹಕರ  ಆಶಯಗಳಿಗೆ ಅನುಗುಣವಾಗಿ ರೂಪಿಸಲಾಗಿದೆ.

‘ಪ್ರತಿಷ್ಠಿತ ಹರ್ಮಾನ್‌ ಸಂಸ್ಥೆಯ ಟಚ್‌ಸ್ಟ್ರೀನ್‌ ಮ್ಯೂಸಿಕ್‌ ಸಿಸ್ಟಂ ಜತೆ ಬರುವ  ಆರು ಸೀಟುಗಳ ಸಾಮರ್ಥ್ಯದ ‘ಹೆಕ್ಸಾ’ ವಾಹನಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅವರು ತಿಳಿಸಿದರು.

ಚಾಲಕರಿಗೆ ಸೂಪರ್‌ ಡ್ರೈವ್ ಮೋಡ್‌ ಸೌಲಭ್ಯವಿದ್ದು, ಪ್ರತಿ ಲೀಟರ್‌ಗೆ 14.4 ಕಿಲೋ ಮೀಟರ್‌ ಮೈಲೇಜ್‌ ನೀಡುತ್ತದೆ. ಆರು ವೈವಿಧ್ಯಮಯ ವಿನ್ಯಾಸ ಮತ್ತು ಐದು ಆಕರ್ಷಕ ಬಣ್ಣಗಳಲ್ಲಿ  ಹೆಕ್ಸಾ ಲಭ್ಯವಿದೆ. ಮುಂಗಡವಾಗಿ ಬುಕ್ಕಿಂಗ್‌ ಮಾಡುವ ಗ್ರಾಹಕರು ವಾಹನ ಕೈಸೇರಲು ಎಂಟು ವಾರ ಕಾಯಬೇಕಾಗುತ್ತದೆ.ಬೆಂಗಳೂರಿನಲ್ಲಿ ಎಕ್ಸ್ ಷೋ ರೂಂ ಬೆಲೆ ₹12.25 ಲಕ್ಷದಿಂದ ₹15.16 ಲಕ್ಷದವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT