ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾರ್ಕಟೆಲ್ ಅಧ್ಯಕ್ಷ ನಾರಾಯಣನ್ ರಾಜಗೋಪಾಲನ್, ‘ತಮಿಳುನಾಡಿನ ಪರಮಪತಿ ವೇಲೂರು ಗ್ರಾಮದಲ್ಲಿ ಪ್ರಾಯೋಗಿಕವಾಗಿ ವೈಫೈ ಹಾಟ್ಸ್ಪಾಟ್ ಸ್ಥಾಪಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ತೆರೆಯಲಾಗಿದ್ದು, ಕತ್ರಿಗುಪ್ಪೆಯಲ್ಲಿ ವೈಫೈ ಹಾಟ್ಸ್ಪಾಟ್ ಸ್ಥಾಪಿಸಲಾಗಿದೆ’ ಎಂದರು.