ಬೆಂಗಳೂರು: ವಿಶ್ವಸಂಸ್ಥೆ ಅಂಕಿ ಅಂಶಗಳ ಪ್ರಕಾರ ೨೦೧೭ರ ವೇಳೆಗೆ ಭಾರತದಲ್ಲಿ ೬೦ ವರ್ಷಕ್ಕಿಂತ ಮೇಲಿನವರ ಸಂಖ್ಯೆ ೧೧.೮೦ ಕೋಟಿಯಷ್ಟಿರಲಿದೆ. ಹಾಗಾಗಿ, ಹಿರಿಯರ ನೆಮ್ಮದಿಯ ಬದುಕಿಗೆ ಅನು ಕೂಲಕಾರಿಯಾದ ಮನೆಗಳ ನಿರ್ಮಾಣ ಅಗತ್ಯವಿದೆ ಎಂದು ‘ಟಾಟಾ ಹೌಸಿಂಗ್ ಡೆವಲಪ್ಮೆಂಟ್ ಕಂಪೆನಿ ಲಿ.’ ಹೇಳಿದೆ.
ನಗರದಲ್ಲಿ ಈ ಮೊದಲು ಹಿರಿಯರಿ ಗಾಗಿಯೇ ಆರಂಭಿಸಿದ ‘ರಿವಾ ರೆಸಿಡೆನ್ಸಿ’ ಯೋಜನೆ ಯಶಸ್ಸು ಕಂಡಿದೆ. ೨೦೧೮ ರೊಳಗೆ ದೇಶದ ೮ ನಗರಗಳಿಗೆ ರಿವಾ ರೆಸಿಡೆನ್ಸಿ ಬ್ರಾಂಡ್ ವಿಸ್ತರಿಸಿ, ೧೨ ವಸತಿ ಯೋಜನೆ ಪೂರ್ಣಗೊಳಿಸಲಾಗುವುದು. ಈ ನಿಟ್ಟಿನಲ್ಲಿ ರೂ.1200 ಕೋಟಿ ಹೂಡಿಕೆ ಮಾಡಲಾಗುವುದು ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬ್ರೋತಿನ್ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.