ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ; ಗಂಭೀರ ಗಾಯ

7
ಮಲಘಾಣ: ಈರಮ್ಮ ಬಿರಾದಾರ ಗೆಲುವು

ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ; ಗಂಭೀರ ಗಾಯ

Published:
Updated:
Prajavani

ಆಲಮೇಲ: ಸಿಂದಗಿ ತಾಲ್ಲೂಕಿನ ಮಲಘಾಣ ತಾಲ್ಲೂಕು ಪಂಚಾಯ್ತಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಅಭ್ಯರ್ಥಿ ಈರಮ್ಮ ಶಾಂತಗೌಡ ಬಿರಾದಾರ ಗೆಲುವು ಸಾಧಿಸಿದ್ದಾರೆ.

ಇದೇ ಜ.2ರಂದು ಚುನಾವಣೆ ನಡೆದಿತ್ತು. ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಎರಡು ಮತಗಳ ಅಂತರದಿಂದ ಈರಮ್ಮ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ವಿಜಯ ಸಾಧಿಸಿದ್ದಾರೆ.

ಫಲಿತಾಂಶ ಪ್ರಕಟಗೊಂಡ ಬಳಿಕ ಜೆಡಿಎಸ್‌ ಕಾರ್ಯಕರ್ತರು ಮಲಘಾಣ ಗ್ರಾಮದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದ ವೇಳೆ, ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಶ್ರೀಶೈಲ ಬಿರಾದಾರ, ಬಸವರಾಜ ಬಿರಾದಾರ, ಮಲ್ಲಿನಾಥ ಬಿರಾದಾರ, ಶಾಂತರಾಯ ಬಿರಾದಾರ ಗಾಯಗೊಂಡಿದ್ದು, ಸಿಂದಗಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿಯ ಪರಾಜಿತ ಅಭ್ಯರ್ಥಿ ಶ್ರೀಮಂತ ರಾಮನಳ್ಳಿ, ಮುಖಂಡ ಯಶವಂತರಾಯಗೌಡ ರೂಗಿ ಸೋಹದರರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !