ಶನಿವಾರ, ಸೆಪ್ಟೆಂಬರ್ 21, 2019
21 °C

ಕೆನಡಾದಲ್ಲಿ ‘ಮೂಕಜ್ಜಿಯ ಕನಸುಗಳು‘ಪ್ರದರ್ಶನ

Published:
Updated:
Prajavani

ಕನ್ನಡದ ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಅವರು ನಿರ್ದೇಶಿಸಿರುವ ಡಾ.ಶಿವರಾಮಕಾರಂತರ ಕಾದಂಬರಿ ಆಧಾರಿತ ‘ಮೂಕಜ್ಜಿಯ ಕನಸುಗಳು’ ಸಿನಿಮಾ ಕೆನಡಾದಲ್ಲಿ ಇದೇ ತಿಂಗಳು 9ರಿಂದ 19ರವರೆಗೆ ಟೊರೊಂಟೊದಲ್ಲಿ ನಡೆಯಲಿರುವ ಐಎಫ್‌ಎಫ್‌ಎಸ್‌ಎ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.

ಟೊರೊಂಟೊದ ಸ್ಕಾರ್‌ಬರೊ ನಗರದಲ್ಲಿ ಮೇ 18ರಂದು ಸಂಜೆ 7.30ಕ್ಕೆ ‘ಮೂಕಜ್ಜಿಯ ಕನಸುಗಳು’ ಸಿನಿಮಾ ಪ್ರದರ್ಶನವಾಗಲಿದೆ. ಅಲ್ಲದೆ, ಮಿನಿಯಾಪೋಲಿಸ್‌ ಮತ್ತು ಡೆಟ್ರಾಯಿಟ್‌ನಲ್ಲೂ ಈ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಅಲ್ಲದೆ, ಈ ಸಿನಿಮೋತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಮಂಗಳವಾರ ಕೆನಡಾಕ್ಕೆ ಪ್ರಯಾಣ ಬೆಳೆಸುತ್ತಿರುವುದಾಗಿ ಪಿ.ಶೇಷಾದ್ರಿ ತಿಳಿಸಿದ್ದಾರೆ.

Post Comments (+)