ಕ್ಯಾನ್ಸರ್‌ ಚಿಕಿತ್ಸೆ: ವರ್ಗಾವಣೆ ಅವಧಿ ವಿಸ್ತರಿಸಲು ಆದೇಶ

7

ಕ್ಯಾನ್ಸರ್‌ ಚಿಕಿತ್ಸೆ: ವರ್ಗಾವಣೆ ಅವಧಿ ವಿಸ್ತರಿಸಲು ಆದೇಶ

Published:
Updated:

ಬೆಂಗಳೂರು: ‘ಕ್ಯಾನ್ಸರ್‌ನಿಂದ ಬಳಲುತ್ತಿರುವ ಆರು ವರ್ಷದ ಮಗನಿಗೆ ಚಿಕಿತ್ಸೆ ಮುಂದುವರಿಸಬೇಕಾದ ಕಾರಣ ವರ್ಗಾವಣೆ ಅವಧಿ ವಿಸ್ತರಿಸಬೇಕು ಎಂದು ಕೋರಿ ಸಿಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಸಲ್ಲಿಸಿರುವ ಅಡಿವೆಪ್ಪ ಗೋಣಿ ಅವರ ಮನವಿಯನ್ನು ಒಂದು ವಾರದೊಳಗೆ ಪರಿಗಣಿಸಬೇಕು’ ಎಂದು ಹೈಕೋರ್ಟ್‌ ಸಿಆರ್‌ಪಿಎಫ್‌ಗೆ ನಿರ್ದೇಶಿಸಿದೆ.

ಈ ಕುರಿತಂತೆ ಅಡಿವೆಪ್ಪ ಗೋಣಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಲೇವಾರಿ ಮಾಡಿದೆ.

‘ಹೈಕೋರ್ಟ್ ಆದೇಶ ನೀಡಿದ ಒಂದು ವಾರದೊಳಗೆ ಅರ್ಜಿದಾರರು ಸಿಆರ್‌ಪಿಎಫ್‌ಗೆ ಮರು ಮನವಿ ಸಲ್ಲಿಸಬೇಕು. ನಂತರ ಒಂದು ವಾರದೊಳಗೆ ಮನವಿಯನ್ನು ಪರಿಗಣಿಸಿ ಸಿಆರ್‌ಪಿಎಫ್‌ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ. 

ಪ್ರಕರಣವೇನು?: ಅಡಿವೆಪ್ಪ ಗೋಣಿ ಸಿಆರ್‌ಪಿಎಫ್‌ನ ದೆಹಲಿ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗನಿಗೆ ಕ್ಯಾನ್ಸರ್‌ ಇರುವ ಕಾರಣ ಕಿದ್ವಾಯಿ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ. ಆದ್ದರಿಂದ ಒಂದು ವರ್ಷದ ಅವಧಿಗೆ ಬೆಂಗಳೂರು ಬೆಟಾಲಿಯನ್‌ಗೆ ವರ್ಗಾವಣೆ ಮಾಡಬೇಕು ಎಂದು ಕೋರಿ 2016ರಲ್ಲಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಇದರನ್ವಯ ಅವರನ್ನು ಬೆಂಗಳೂರಿನ ಸಿಆರ್‌ಪಿಎಫ್‌ ಯಲಹಂಕ ಗ್ರೂಪ್ ಸೆಂಟರ್‌ಗೆ ವರ್ಗಾವಣೆ ಮಾಡಲಾಗಿತ್ತು. ಏತನ್ಮಧ್ಯೆ ಮಗುವಿಗೆ ಇನ್ನೆರಡು ವರ್ಷ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.

ಈ ವೇಳೆಗಾಘಲೇ ಒಂದು ವರ್ಷ ಅವಧಿ ಮುಗಿದಿದ್ದ ಕಾರಣ ಅಡಿವೆಪ್ಪ ಅವರನ್ನು ದೆಹಲಿ ಬೆಟಾಲಿಯನ್‌ಗೆ ಮತ್ತೆ ವರ್ಗಾವಣೆ ಮಾಡಲಾಗಿತ್ತು. ‘ಚಿಕಿತ್ಸೆ ಮುಂದುವರೆಸಬೇಕಾಗಿರುವುದರಿಂದ ಇನ್ನೆರಡು ವರ್ಷ ವರ್ಗಾವಣೆ ಅವಧಿ ವಿಸ್ತರಿಸಿ’ ಎಂದು ಅವರು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಡಿವೆಪ್ಪ ಹೈಕೋರ್ಟ್ ಮೊರೆ ಹೊಕ್ಕಿದ್ದರು.

ಅರ್ಜಿದಾರರ ಪರ ವಕೀಲ ಕೆ. ಶ್ರೀನಿವಾಸ ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !