ಸರಕು ಸಾಗಣೆ: 125 ಬಸ್‌ಗಳ ವಿರುದ್ಧ ಪ್ರಕರಣ

7

ಸರಕು ಸಾಗಣೆ: 125 ಬಸ್‌ಗಳ ವಿರುದ್ಧ ಪ್ರಕರಣ

Published:
Updated:

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಪರವಾನಗಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 125 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ಸಾರ್ವಜನಿಕರ ಪ್ರಯಾಣಕ್ಕಾಗಿ ಅಖಿಲ ಭಾರತ ಪ್ರವಾಸಿ ವಾಹನಗಳ ಪರವಾನಗಿ ಪಡೆದಿರುವ ಬಸ್‌ಗಳು, ಅನಧಿಕೃತವಾಗಿ ಸರಕು ಸಾಗಣೆ ಮಾಡುತ್ತಿದ್ದವು. ಐದು ತಂಡಗಳನ್ನು ರಚಿಸಿ ನಗರದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು.

ಮೆಜೆಸ್ಟಿಕ್, ಗೊರಗುಂಟೆ ಪಾಳ್ಯ, ಮಡಿವಾಳ, ಕಲಾಸಿಪಾಳ್ಯ ಹಾಗೂ ದೇವನಹಳ್ಳಿ ಟೋಲ್ ಕಡೆಗಳಲ್ಲಿ 250 ವಾಹನಗಳನ್ನು ತಪಾಸಣೆ ನಡೆಸಲಾಯಿತು. ಆ ಪೈಕಿ 125 ವಾಹನಗಳಲ್ಲಿ ಸರಕು ಸಾಗಣೆ ಮಾಡುತ್ತಿದ್ದುದ್ದು ಕಂಡುಬಂತು ಎಂದರು.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !