ಗುರುವಾರ , ಆಗಸ್ಟ್ 22, 2019
21 °C

ವಿಜಯಾ ರಿಕ್ರಿಯೇಷನ್ ಕ್ಲಬ್‍ ಮೇಲೆ ದಾಳಿ

Published:
Updated:

ಬೆಂಗಳೂರು: ಸಿಟಿ ಮಾರ್ಕೆಟ್ ಬಳಿಯ ಕಿಲಾರಿ ರಸ್ತೆಯಲ್ಲಿರುವ ವಿಜಯಾ ರಿಕ್ರಿಯೇಷನ್ ಕ್ಲಬ್‍ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಜೂಜಾಟದಲ್ಲಿ ತೊಡಗಿದ್ದ 58 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

‘ಸದಸ್ಯರಲ್ಲದ ವ್ಯಕ್ತಿಗಳು ಕ್ಲಬ್‌ಗೆ ಬಂದು ಜೂಜಾಟದಲ್ಲಿ ತೊಡಗಿದ್ದರು. ಆ ಬಗ್ಗೆ ಬಂದ ಮಾಹಿತಿ ಆಧರಿಸಿ ಕ್ಲಬ್‌ ಮೇಲೆ ದಾಳಿ ಮಾಡಲಾಯಿತು. ₹ 1.01 ಲಕ್ಷ ನಗದನ್ನೂ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕ್ಲಬ್‌ ಮಾಲೀಕ ಪ್ರಕಾಶ್ ಹಾಗೂ ಕ್ಯಾಶಿಯರ್ ಎನ್‌.ಎಂ. ನಾಗಣ್ಣ ಸೇರಿದಂತೆ 58 ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ. ಸಿಟಿ ಮಾರ್ಕೆಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದರು.

Post Comments (+)