ವಾರದ ಏಳು ದಿನವೂ ಗ್ರಂಥಾಲಯ ಓಪನ್‌ ...!

7
ಪ್ರಾಥಮಿಕ‌ ಶಿಕ್ಷಣ ಸಚಿವ ಎನ್‌. ಮಹೇಶ ಆದೇಶ

ವಾರದ ಏಳು ದಿನವೂ ಗ್ರಂಥಾಲಯ ಓಪನ್‌ ...!

Published:
Updated:
Deccan Herald

ಬೆಂಗಳೂರು: ಇನ್ನು ಮುಂದೆ ವಿದ್ಯಾರ್ಥಿಗಳು, ಓದುಗರು ಗ್ರಂಥಾಲಯಗಳಿಗೆ ವಾರದ ಏಳು ದಿನವೂ ಹೋಗಬಹುದು. ಹೌದು, ಇಂತಹ ಸದಾವಕಾಶ ಶೀಘ್ರವೆ ದೊರೆಯಲಿದೆ. 

ಸಾರ್ವಜನಿಕ ಗ್ರಂಥಾಲಯ ಇಲಾಖೆ ಭಾನುವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ‌ ಶಿಕ್ಷಣ ಸಚಿವ ಎನ್.ಮಹೇಶ, ‘ಓದುಗರಿಗೆ ನೆರವಾಗುವ ದೃಷ್ಠಿಯಿಂದ ವಾರದ ಏಳು ದಿನವೂ ರಾಜ್ಯದ ಎಲ್ಲ ಗ್ರಂಥಾಲಯಗಳು ಕಾರ್ಯನಿರ್ವಹಿಸಲು ಇಲಾಖೆ ಕ್ರಮಕೈಗೊಳ್ಳಬೇಕು’ ಎಂದು ಆದೇಶಿಸಿದ್ದಾರೆ.

‘ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಅಗತ್ಯವಾದ ಪುಸ್ತಕಗಳನ್ನು ಕೂಡಲೇ ಒದಗಿಸಬೇಕು’ ಎಂದೂ ಅಧಿಕಾರಿಗಳಿಗೆ ಸೂಚಿಸಿದರು.

‘ಪುಸ್ತಕ ಸಂಸ್ಕೃತಿ ಬೆಳೆಸುವ ಸಲುವಾಗಿ ಪ್ರತಿ ಜಿಲ್ಲೆ, ಸಾಧ್ಯವಾದರೆ ಪಂಚಾಯ್ತಿ ಮಟ್ಟದಲ್ಲಿಯೂ ಹೈಟೆಕ್‌ ಗ್ರಂಥಾಲಯಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಗ್ರಂಥಾಲಯಗಳ ಡಿಜಿಟಲೀಕರಣಕ್ಕೆ ₹ 5 ಕೋಟಿ ಬಿಡುಗಡೆ ಮಾಡಲಾಗಿದೆ. ಡಿಜಿಟಲೀಕರಣದಿಂದ 10 ಲಕ್ಷ ಜನ ಓದುಗರಿಗೆ ಉಪಯುಕ್ತವಾಗಲಿದೆ’ ಎಂದರು. 

‘ಮೂಲಸೌಕರ್ಯ ವಂಚಿತ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವು ಮತ್ತು ಹೊಸ ಕಟ್ಟಡಗಳ ನಿರ್ಮಾಣ, ಪಾರಂಪರಿಕ ಶಾಲಾ ಕಟ್ಟಡಗಳ ಪುನಶ್ಚೇತನಕ್ಕೆ ₹4,568 ಕೋಟಿ ಬೇಕು. ಆದರೆ, ಬಜೆಟ್‌ನಲ್ಲಿ ಕೇವಲ ₹ 480 ಕೋಟಿ ಹಣ ಸಿಕ್ಕಿದೆ. ಹಾಗಾಗಿ, ಶಾಸಕರು ಮತ್ತು ಸಂಸದರ ನಿಧಿ ಸೇರಿ ಇತರ ಅನುದಾನಗಳನ್ನು ಬಳಸಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತೇನೆ’ ಎಂದು ಹೇಳಿದರು. 

ಶಾಸಕ, ಸಂಸದರಿಗೆ ಪತ್ರ: ‘ಶಾಸಕರು, ಸಂಸದರು ತಮ್ಮ ಊರುಗಳಲ್ಲಿರುವ ಶಾಲೆಗಳನ್ನು ಸುಸಜ್ಜಿತಗೊಳಿಸುವ ಜವಾಬ್ದಾರಿ ಹೊರಬೇಕು ಎಂದು ಮನವಿ ಮಾಡಿ, ಅವರಿಗೆ ಪತ್ರ ಬರೆಯುವ ನಿರ್ಧಾರ ಮಾಡಿದ್ದೇನೆ’ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !