ಬಾಗೇಪಲ್ಲಿ: ಸ್ವಾತಂತ್ರ್ಯ ಹೋರಾಟಗಾರ ಎನ್.ವಿ.ಕೃಷ್ಣಮಾಚಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವ ಗಳೊಂದಿಗೆ ಶುಕ್ರವಾರ ಅಂತ್ಯಕ್ರಿಯೆ ನಡೆಸಲಾಯಿತು. ನಂತರ ಚಿತ್ರಾವತಿ ದಡದ ಸ್ಮಶಾನದಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಲಾಯಿತು.

ಕೃಷ್ಣಮಾಚಾರ್ ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಬುಧವಾರ ನಿಧನ ರಾಗಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ವಿದ್ಯಾರ್ಥಿಗಳು, ಅಧಿಕಾರಿಗಳು, ಸ್ಥಳೀಯರು, ಬಂಧುಗಳು ಹಿರಿಯರ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು.

ನಂತರ ಸರ್ಕಾರದ ಪರವಾಗಿ ತಹಶೀಲ್ದಾರ್ ಮಹಮ್ಮದ್ ಅಸ್ಲಂ, ಸಿಪಿಐ ನಯಾಜ್ಬೇಗ್, ಪಿಎಸ್ಐ ಪಿ.ಎಂ. ನವೀನ್, ಪುರಸಭಾ ಮುಖ್ಯಾಧಿಕಾರಿ ಪಂಕಜಾ ರೆಡ್ಡಿ, ಅಧ್ಯಕ್ಷ ಮಮತಾ ನಾಗರಾಜರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಹನುಮಂತರೆಡ್ಡಿ, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಎ.ಜಿ. ಸುಧಾಕರ್, ಧರ್ಮದರ್ಶಿ ಕೆ.ಎಂ. ನಾಗರಾಜು, ಮಾಜಿ ಶಾಸಕ ಎನ್. ಸಂಪಂಗಿ ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿದರು.

ನಿವೃತ್ತ ಯೋಧರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ನಿವೃತ್ತ ಯೋಧರಾದ ಅಮರನಾಥಬಾಬು, ರವಣಪ್ಪ ಗೌರವ ವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು.

ಮೃತರ ಮನೆಯಿಂದ ತಾಲ್ಲೂಕು ಕಚೇರಿ ವರೆಗೆ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ತರಲಾಯಿತು. ವಿದ್ಯಾರ್ಥಿಗಳು ದಾರಿಯುದ್ದಕ್ಕೂ ರಘುಪತಿ ರಾಘವ ರಾಜಾರಾಂ.. ಗೀತೆ ಹಾಡಿದರು.

ಹಿರಿಯರ ತ್ಯಾಗ, ಹೋರಾಟದ ಮನೋಭಾವನೆ, ಆದರ್ಶಗಳು ಯುವಜನರಿಗೆ ಮಾರ್ಗದರ್ಶಕ ಸೂತ್ರವಾಗಿವೆ. ಅವರ ತತ್ವಗಳ ಪಾಲನೆಯೇ ಅವರಿಗೆ ಸಲ್ಲಿಸುವ ಗೌರವ.
-ರಾಮಚಂದ್ರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ, ನಿವೃತ್ತ ಯೋಧರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.