ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆ; ಜಿಲ್ಲಾಡಳಿತದ ಹದ್ದಿನ ಕಣ್ಣು

7
ಚಿಕ್ಕಲ್ಲೂರು: ಮೂರನೇ ದಿನ, ಮುಡಿಸೇವೆ, ಉರುಸೇವೆ

ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆ; ಜಿಲ್ಲಾಡಳಿತದ ಹದ್ದಿನ ಕಣ್ಣು

Published:
Updated:
Prajavani

ಕೊಳ್ಳೇಗಾಲ: ಐತಿಹಾಸಿಕ ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆ ಗುರುವಾರ ನಡೆಯಲಿದೆ. ಸಾವಿರಾರು ಭಕ್ತರು ಭರದ ಸಿದ್ಧತೆ ನಡೆಸಿದ್ದಾರೆ.

ಪಂಕ್ತಿ ಸೇವೆ ಹೆಸರಿನಲ್ಲಿ ಪ್ರಾಣಿ ಬಲಿ ನೀಡದಂತೆ ಹೈಕೋರ್ಟ್‌ನ ಆದೇಶ ಇರುವುದರಿಂದ, ಜಿಲ್ಲಾಡಳಿತ ಪ್ರಾಣಿ ಬಲಿಗೆ ಅವಕಾಶ ಕಲ್ಪಿಸಿಲ್ಲ. ಹಾಗಾಗಿ, ಜಾತ್ರೆಯಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಅದು ಹದ್ದಿನ ಕಣ್ಣು ಇಟ್ಟಿದೆ. 

ಚಿಕ್ಕಲ್ಲೂರು ಜಾತ್ರೆಯಲ್ಲಿ ನಾಲ್ಕನೇ ದಿನ ನಡೆಯುವ ಪಂಕ್ತಿಸೇವೆ ಈ ಜಾತ್ರೆಯ ಪ್ರಧಾನ ಆಚರಣೆ. ಆಡು, ಕುರಿ ಕೋಳಿಗಳನ್ನು ದೇವರಿಗೆ ಬಲಿ ನೀಡಿ, ಅದರಿಂದ ಆಹಾರ ಸಿದ್ಧಪಡಿಸಿ ಪ್ರದಾದ ರೂಪದಲ್ಲಿ ಸೇವಿಸುವುದು ಇಲ್ಲಿನ ಪದ್ಧತಿ. ಆದರೆ, ಪ್ರಾಣಿ ಬಲಿಗೆ ಅವಕಾಶ ಇಲ್ಲದಿರುವುದರಿಂದ ಪೊಲೀಸರು ಹಾಗೂ ಅಧಿಕಾರಿಗಳು ಜಾತ್ರೆಗೆ ಬರುವ ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪ‍ಡಿಸಿ, ಪ್ರಾಣಿಗಳನ್ನು ಸಾಗಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. 

ಪ್ರತಿ ವರ್ಷವೂ ವಿಜೃಂಭಣೆಯಿಂದ ನಡೆಯುವ ಪಂಕ್ತಿ ಸೇವೆಯಲ್ಲಿ ಭಕ್ತರು ಸಸ್ಯಹಾರಿ ಮತ್ತು ಮಾಂಸಾಹಾರದ ಅಡುಗೆ ಸಿದ್ಧಪಡಿಸಿ ಕಂಡಾಯ ಮುಂದೆ ಎಡೆ ಅರ್ಪಿಸುತ್ತಾರೆ. ನಂತರ ಎಲ್ಲಾರೂ ಪಂಕ್ತಿಭೋಜನ ಸಾಂಪ್ರದಾಯಿಕವಾಗಿ ಮಾಡುತ್ತಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಸಹ ಪಂಕ್ತಿ ಬೋಜನಕ್ಕೆ ವಿರೋಧ ವ್ಯಕ್ತವಾಗಿದ್ದು, ಭಕ್ತರಲ್ಲಿ ಒಂದು ರೀತಿಯ ತಳಮಳ ಉಂಟಾಗಿದೆ. ಕಳೆದ ವರ್ಷ ನಿರ್ಬಂಧ ಇದ್ದರೂ ಪಂಕ್ತಿ ಸೇವೆ ನಡೆದಿತ್ತು.‌  

ಭಕ್ತರ ಸಂಖ್ಯೆ ಕಡಿಮೆ: ಪಂಕ್ತಿಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರುತ್ತಾರೋ ಇಲ್ಲವೋ ‌ಎಂಬ ಚರ್ಚೆ ಜಾತ್ರೆಯಲ್ಲಿ ನಡೆದಿದೆ. ಬುಧವಾರ ನಡೆದ ಮುಡಿಸೇವೆಗೆ ಕಳೆದ ವರ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಜನ ಬಂದಿದ್ದು ಇದಕ್ಕೆ ಕಾರಣ. 

ಮುಡಿ ಸೇವೆ, ಉರುಳು ಸೇವೆ...
ಚಿಕ್ಕಲ್ಲೂರು ಜಾತ್ರೆಯ ಮೂರನೇ ದಿನವಾದ ಬುಧವಾರ ಮುಡಿಸೇವೆ ಮತ್ತು ಉರುಳು ಸೇವೆ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. 

ಜಾತ್ರೆಯಲ್ಲಿ ದೇವರ ಗದ್ದಿಯ ಮುಂದೆ ವಿಶೇಷ ಪೂಜೆ ಮಾಡಿಸಿದ ನಂತರ ಭಕ್ತರು ಮುಡಿಯನ್ನು ಅರ್ಪಿಸಿ ದೇವಸ್ಥಾನದ ಮುಂದೆ ಉರುಳು ಸೇವೆ ನಡೆಸಿದರು. ಆ ಬಳಿಕ ಸೇವೆ ಮಾಡಿದ ಭಕ್ತರು ದೇವಸ್ಥಾನದ ಒಳಗೆ ಪ್ರವೇಶ ನಡೆಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಹರಕೆಗಳನ್ನು ತೀರಿಸಿದರು.

ಮೇಕೆ, ಕುರಿ ವಶ
ಪಂಕ್ತಿ ಸೇವೆಗೆ ಆಗಮಿಸುತ್ತಿರುವ ವಾಹನಗಳನ್ನು ತಪಾಸಣೆ ನಡೆಸಿರುವ ಪೊಲೀಸರು ಮತ್ತು ಅಧಿಕಾರಿಗಳು, 37 ಮೇಕೆ, 7 ಕುರಿ, 57 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ವಾಹನಗಳಿಂದ ಅಬಕಾರಿ ಪೊಲೀಸರು ಮದ್ಯದ ಬಾಟಲಿಗಳನ್ನೂ ವಶಕ್ಕೆ ಪಡೆಯಲಾಗಿದೆ. 

ಈ ವೇಳೆ ಭಕ್ತಾದಿಗಳಿಗೂ ಮತ್ತು ಅಧಿಕಾರಿಗಳಿಗೂ ಮಾತಿನ ಚಕಮಕಿ ನಡೆದಿದೆ. ಕೆಲವರು ತಪಾಸಣೆ ಮಾಡುತ್ತಿರುವ ವೇಳೆ ಕುರಿ ಮತ್ತು ಕೋಳಿಗಳನ್ನು ಎತ್ತಿಕೊಂಡು ಕಾಲು ದಾರಿಯಲ್ಲಿ ಓಡಿಹೋಗಿದ್ದಾರೆ. ವಶಪಡಿಸಿಕೊಂಡ ಪ್ರಾಣಿಗಳನ್ನು ಪಶು ಇಲಾಖೆಗೆ ಒಪ್ಪಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !