‘ಫಿಲ್ಲಿಪ್ಪೀನ್ಸ್‌ನಲ್ಲಿ ಚೀನಾ ಚಟುವಟಿಕೆ ಕಳವಳಕಾರಿ’

ಭಾನುವಾರ, ಏಪ್ರಿಲ್ 21, 2019
26 °C

‘ಫಿಲ್ಲಿಪ್ಪೀನ್ಸ್‌ನಲ್ಲಿ ಚೀನಾ ಚಟುವಟಿಕೆ ಕಳವಳಕಾರಿ’

Published:
Updated:
Prajavani

ಬ್ಯಾಂಕಾಕ್‌ (ಎಪಿ): ‘ಫಿಲಿಪ್ಪೀನ್ಸ್‌ನ ವಿವಾದಿತ ಪ್ರದೇಶದಲ್ಲಿ ಹಡಗುಗಳನ್ನು ನೆಲೆಗೊಳಿಸಿರುವ ಚೀನಾದ ನಡೆ ಕಳವಳಕಾರಿ ವಿದ್ಯಮಾನ’ ಎಂದು ಅಮೆರಿಕ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. 

ಫಿಲಿಪ್ಪೀನ್ಸ್‌ ವಿವಾದಿತ ಸ್ಯಾಂಡಿ ಕೇ ದ್ವೀಪ ಮತ್ತು ಅಕ್ಕ–ಪಕ್ಕದ ಸಣ್ಣ ದ್ವೀಪ ಭಾಗದಲ್ಲಿ ಚೀನಾವು 200ಕ್ಕೂ ಹೆಚ್ಚು ಹಡಗುಗಳನ್ನು ನೆಲೆಗೊಳಿಸಿದೆ. ಚೀನಾದ ಈ ನಡೆಯನ್ನು ಫಿಲಿಪ್ಪೀನ್ಸ್‌ ಸರ್ಕಾರವೂ ಖಂಡಿಸಿದೆ. 

‘ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಯಾವುದೇ ದೇಶವು ಪ್ರಚೋದನಕಾರಿ ಚಟುವಟಿಕೆ ಕೈಗೊಳ್ಳುವುದು ಸರಿಯಲ್ಲ. ಈಗ ಚೀನಾ ಇಂತಹ ಕೆಲಸಕ್ಕೆ ಮುಂದಾಗುವುದು ಅನವಶ್ಯಕವಾಗಿತ್ತು’ ಎಂದು ಅಮೆರಿಕ ರಕ್ಷಣಾ ಸಚಿವಾಲಯದ ದಕ್ಷಿಣ ಏಷ್ಯಾ ಉಪಸಹಾಯಕ ಕಾರ್ಯದರ್ಶಿ ಜೋಸೆಫ್‌ ಫೆಲ್ಟರ್‌ ಹೇಳಿದ್ದಾರೆ. 

‘ಇಂಡೊ–ಫೆಸಿಪಿಕ್‌ ವಲಯದ ಸದಸ್ಯ ರಾಷ್ಟ್ರಗಳ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಿಸುವಲ್ಲಿ ಅಮೆರಿಕ ಬದ್ಧವಾಗಿದೆ’ ಎಂದು ಅವರು ಹೇಳಿದ್ದಾರೆ. 

ಸ್ಯಾಂಡಿ ಕೇ ದ್ವೀಪ ತನಗೆ ಸೇರಿದ್ದು ಎಂದು ಚೀನಾ ಮೊದಲಿನಿಂದ ಪ್ರತಿಪಾದಿಸುತ್ತಲೇ ಇದೆ. ಇದು ಫಿಲಿಪ್ಪೀನ್ಸ್‌ ಆಕ್ರಮಿತ ಪ್ರದೇಶವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !