ಸೌಲಭ್ಯ ಕೇಳಿದ ಮಾಜಿ ಯೋಧರಿಗೆ ಜೈಲು ಶಿಕ್ಷೆ

ಶನಿವಾರ, ಮೇ 25, 2019
25 °C

ಸೌಲಭ್ಯ ಕೇಳಿದ ಮಾಜಿ ಯೋಧರಿಗೆ ಜೈಲು ಶಿಕ್ಷೆ

Published:
Updated:

ಬೀಜಿಂಗ್: ನಿವೃತ್ತಿಯ ನಂತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ 47 ಮಾಜಿ ಸೈನಿಕರಿಗೆ ಇಲ್ಲಿನ ನ್ಯಾಯಾಲಯ ಆರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿದೆ.

ಚೀನಾದ ಪೂರ್ವ ಪ್ರಾಂತ್ಯದ ನ್ಯಾಯಾಲಯ ಶುಕ್ರವಾರ ಈ ಆದೇಶ ಹೊರಡಿಸಿದೆ. ಷಾಂಡಾಂಗ್‌ ಮತ್ತು ಜಿಯಾಂಗ್ಸುನಲ್ಲಿ ಮಾಜಿ ಯೋಧರು ಪದೇ ಪದೇ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಬೀಜಿಂಗ್‌ನಲ್ಲಿನ ಸರ್ಕಾರಿ ಕಚೇರಿ ಮತ್ತು ರಕ್ಷಣಾ ಸಚಿವಾಲಯದ ಮುಖ್ಯ ಕಚೇರಿ ಮುಂಭಾಗವೂ ಪ್ರತಿಭಟಿಸಿದ್ದರು.

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷವು ಸಾರ್ವಜನಿಕ ಪ್ರತಿಭಟನೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಕಳೆದ ವರ್ಷ ನಿವೃತ್ತಿಯಾದ ಸಾವಿರಕ್ಕೂ ಹೆಚ್ಚು ಯೋಧರು ತಮಗೆ ನೀಡಲಾದ ಆರ್ಥಿಕ ಸೌಲಭ್ಯ ಅತಿ ಕಡಿಮೆಯಿದೆ ಎಂದು ದೂರಿ ಪ್ರತಿಭಟನೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !