ಸಮೂಹ ಸನ್ನಿ!

7

ಸಮೂಹ ಸನ್ನಿ!

Published:
Updated:
Deccan Herald

ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್‌ಳ ಬೆಂಗಳೂರಿನ ಕಾರ್ಯಕ್ರಮ ಸಾಂಗೋಪಸಾಂಗವಾಗಿ ಸಂಪನ್ನಗೊಂಡಿರು
ವುದು ಕಂಡು ಸನ್ನಿ ಅಭಿಮಾನಿಗಳು, ಸಂಘಟಕರು, ಪೊಲೀಸರು ಅವರವರ ಭಾವಕ್ಕೆ ತಕ್ಕಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟರಂತೆ.

ಒಂದು ವರ್ಷದಿಂದ ಈ ಮೋಹಕ ತಾರೆಯ ದರ್ಶನ ಭಾಗ್ಯಕ್ಕೆ ಕಾದು ಕುಳಿತಿದ್ದ ಕಲಾ ರಸಿಕರು ಕಣ್ಣರಳಿಸಿಕೊಂಡು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕುಣಿದು ಕುಪ್ಪಳಿಸಿ ಸಂತೃಪ್ತರಾಗಿದ್ದಾರೆ. ವರ್ಷದ ಹಿಂದೆಯೇ ಕನಸುಗಳಿಗೆ ರಂಗು ತುಂಬಲಿದ್ದ ಸನ್ನಿ, ನವೆಂಬರ್‌ನಲ್ಲಿ ರಾಜ್ಯೋತ್ಸವ ಕೊಡುಗೆ ರೂಪದಲ್ಲಿ ಬಂದು ಕುಣಿದು ಕಲಾಭಿಮಾನಿಗಳ ಕಿಚ್ಚು ತಣ್ಣಗಾಗಿಸಿದ್ದಾಳೆ.

‘ಫ್ಯೂಷನ್ ನೈಟ್ಸ್‌’ ಅನ್ನು ಕಲಾಭಿಮಾನಿಗಳು ಸವಿದಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಲಿಟ್ಟ ಕೂಡಲೇ ‘ಚಿಲ್‌ ಬೆಂಗಳೂರ್‌’ ಎಂದು ಸನ್ನಿ ಶುಭ ಹಾರೈಸಿದ್ದಕ್ಕೆ ಪುಳಕಗೊಂಡಿದ್ದ ಕಲಾ ರಸಿಕರು ಸಂಗೀತ – ನೃತ್ಯ ಕಾರ್ಯಕ್ರಮದಲ್ಲಿ ನವೋತ್ಸಾಹದಿಂದಲೇ ಭಾಗವಹಿಸಿ ಚಿತ್‌ ಆಗಿದ್ದಾರೆ. ‘ನಾನು ನಿಮ್ಮನ್ನು ತುಂಬಾ, ತುಂಬಾ ಪ್ರೀತಿಸ್ತೇನೆ’ ಎಂದು ಅಚ್ಚ ಕನ್ನಡದಲ್ಲಿ ಉಲಿದ ಸನ್ನಿಯ ಅಸ್ಖಲಿತ ಮಾತು ಕೇಳಿ ಕನ್ನಡಾಂಬೆಯೂ ಸಂಭ್ರಮಿಸಿದಳಂತೆ.

ಸ್ಪಷ್ಟವಾಗಿ ಕನ್ನಡ ನುಡಿಯಲು ಇನ್ನಿಲ್ಲದ ಕಸರತ್ತು ಮಾಡುವ ಕನ್ನಡ ಕುಲ ಪುತ್ರ ಪುತ್ರಿಯರಿಗೆ ಹೋಲಿಸಿದರೆ ಸನ್ನಿಯೇ ಎಷ್ಟೋ ವಾಸಿ ಎಂದೇ ಕನ್ನಡಾಂಬೆ ನಿಟ್ಟುಸಿರು ಬಿಟ್ಟಿರುವಳಂತೆ. ತನ್ನ ಕೆಲ ಕುಲ ಪುತ್ರರ ಕಿಡಿಗೇಡಿ ಕೃತ್ಯದಿಂದ ತನಗೆ ಕೆಟ್ಟ ಹೆಸರು ಬರಬಹುದೆಂದು ದಿಗಿಲುಗೊಂಡಿದ್ದ ಕನ್ನಡಾಂಬೆ ಕೊನೆಗೂ ನಿರಾಳವಾಗಿದ್ದಾಳೆ.  ಪ್ರತಿಭಟನೆ ಹೆಸರಲ್ಲಿ ಅಷ್ಟಿಷ್ಟು ಕಮಾಯಿಸುವುದಕ್ಕೂ ಕಲ್ಲು ಬಿದ್ದಿರುವುದು ಹೀಗೆಯೇ ಮುಂದುವರೆದರೆ ಏನಪ್ಪ ಗತಿ ಅಂತ ಕನವರಿಸುವ ಕೆಲವರ ನಿದ್ದೆಯೇ ಹಾರಿಹೋಗಿದೆಯಂತೆ. ‘ಬಾರವ್ವ ಬಾರವ್ವ ಬಾರೆ’ ಹಾಡಿಗೆ ಹೆಜ್ಜೆ ಹಾಕಿದ ಸನ್ನಿ,  ಕನ್ನಡ ಚಿತ್ರಗಳಲ್ಲಿಯೂ ನಟಿಸಲು ಮುಂದಾದರೆ ಸನ್ನಿ ಜ್ವರ ಸಾಂಕ್ರಾಮಿಕವಾಗಿ ಹಬ್ಬೀತು.

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !