ಕಂಠಿಯ ಸಂಕಟ

7

ಕಂಠಿಯ ಸಂಕಟ

Published:
Updated:

ಮಾರ್ನಿಂಗ್ ವಾಕ್‌ನಲ್ಲಿ ಕಂಠಿಯ ಗೈರುಹಾಜರಿ ಕಾಡಿದ್ದರಿಂದ, ನೇರ ಅವನ ಮನೆಯತ್ತ ಹೆಜ್ಜೆ ಹಾಕಿದೆ.

ಚುಮು ಚುಮು ಚಳಿಯಲ್ಲಿ ಒಂದು ಕಪ್ ಕಾಫಿ ಸಿಕ್ಕೇ ಸಿಗುತ್ತೆ ಎಂಬ ಲೆಕ್ಕಾಚಾರ. ನನ್ನನ್ನು ನೋಡುತ್ತಲೇ ಬೌ ಬೌ ಅಂದ ನಾಯಿಗೆ ‘ಛೆ, ಸರಿ...’ ಎಂದು ಗದರಿಸಿದೆ. ಬಾಲ ಅಲ್ಲಾಡಿಸಿ ತೆಪ್ಪಗಾದಾಗ ಹೆಮ್ಮೆಯೆನಿಸಿತು. ಕನಿಷ್ಠ ನನ್ನ ಮಾತಿಗೆ ನಾಯಿಯಾದರೂ...

ಅಷ್ಟರಲ್ಲೇ ಬಾಗಿಲು ತೆಗೆದ ಶ್ರೀಮತಿ, ‘ಅಯ್ಯೋ ನೀವಾ... ನಾಯಿ ಬೊಗಳಿದ್ದು ನೋಡಿ ಅವರೇ ಬಂದರೇನೋ ಅಂದ್ಕೊಂಡೆ. ಬನ್ನಿ, ಸದ್ಯ ಸರಿಯಾದ ಸಮಯಕ್ಕೇ ಬಂದಿರಿ’ ಎಂದಾಗ ಖುಷಿ, ಗೊಂದಲ ಒಟ್ಟೊಟ್ಟಿಗೇ. ಬೆಳಗಿನ ಉಪಾಹಾರವೂ ಸಿದ್ಧವಿದ್ದು ಆಫರ್ ಮಾಡಿದರೆ ಏನು ಮಾಡುವುದು? ಹಲ್ಲುಜ್ಜದೆ ಬರೀ ಬಾಯಿ ಮುಕ್ಕಳಿಸಿ ವಾಕ್‌ಗೆ ಬಂದವನು...

ಐದು ನಿಮಿಷವಾದರೂ ಕಂಠಿಯ ಸುಳಿವಿಲ್ಲ. ಕಾಫಿಯ ಪರಿಮಳವೂ ಕಾಣೆ. ‘ಕಂಠಿ ಎಲ್ಲಿ...?’ ದನಿಯೇರಿಸಿದೆ.

‘ಹೂಂ. ಅದೇ ಹೇಳೋಕ್ಕೆ ಬಂದೆ... ಅವರು ನಿನ್ನೆ ಬೆಳಿಗ್ಗೆಯಿಂದ ಮನೆಗೆ ಬಂದಿಲ್ಲ. ಪಾಪ, ಎಷ್ಟು ಅವಸ್ಥೆ ಪಡ್ತಿದ್ದಾರೋ ಏನೋ...!’

‘ಅರೆ, ಎಷ್ಟು ಹಗುರಾಗಿ ಹೇಳ್ತಿದ್ದೀರಿ, ನನಗೆ ಒಂದು ಮಾತು ಹೇಳೋದಲ್ವಾ, ನನ್ನ ಕೈಲಾದ ಸಹಾಯ ಮಾಡ್ತಿದ್ದೆ, ಪೊಲೀಸ್ ಕಂಪ್ಲೇಂಟ್‌ ಕೊಟ್ರಾ?’ ಬಡಬಡಿಸಿದೆ.

‘ಅಯ್ಯೋ ಗಾಬರಿಯಾಗುವ ಅವಶ್ಯಕತೆ ಇಲ್ಲ. ನಮ್ಮ ಪುಟ್ಟನನ್ನು ಶಾಲೆಗೆ ಸೇರಿಸಲು ಅಪ್ಲಿಕೇಷನ್ ತರೋಕ್ಕೆ ಹೋಗಿದ್ದಾರೆ. ಇವತ್ತು ಹತ್ತು ಗಂಟೆಯಿಂದ ಕೊಡ್ತಾರಂತೆ...’

‘ಅಬ್ಬಾ, ನಾನು ಹೆದರಿದ್ದೆ... ಸರಿ ಹಾಗಾದ್ರೆ ಹೊರಡ್ತೀನಿ’ ಎಂದು ಮೇಲೆದ್ದೆ.

‘ಒಂದು ಚಿಕ್ಕ ಸಹಾಯ, ಒಂದರ್ಧ ಗಂಟೆ ಅವರ ಜಾಗದಲ್ಲಿ ನಿಂತರೆ ಸಾಕು, ಅಷ್ಟರಲ್ಲಿ ಅವರು ಇಲ್ಲಿ ಬಂದು ಸ್ನಾನ, ಪಾನ ಮುಗಿಸಿ ಬಂದುಬಿಡ್ತಾರೆ’ ಎಂದು ನನ್ನ ಉತ್ತರಕ್ಕೂ ಕಾಯದೆ ಶಾಲೆಯ ಪಾಂಪ್ಲೆಟ್ ಮುಂದಿರಿಸಿ, ‘ಒಂದ್ಸಲ ಫೋನ್ ಮಾಡ್ಬಿಡಿ, ಮಲಗಿದ್ರೆ ಎಚ್ಚರಿಸಿದ ಹಾಗೂ ಆಗುತ್ತೆ’ ಎಂದಾಗ ಪೆಚ್ಚು ನಗೆ ನಕ್ಕೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !