ನ್ಯಾಯಾಲಯಕ್ಕೆ ಶರಣಾದವರು ಸಿಐಡಿ ಕಸ್ಟಡಿಗೆ

7

ನ್ಯಾಯಾಲಯಕ್ಕೆ ಶರಣಾದವರು ಸಿಐಡಿ ಕಸ್ಟಡಿಗೆ

Published:
Updated:

ವಿಜಯಪುರ: ಭೀಮಾ ತೀರದ ರೌಡಿ ಗಂಗಾಧರ ಚಡಚಣನ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಶರಣಾದ ಮೂವರು ಆರೋಪಿಗಳನ್ನು, ಸಿಐಡಿ ಪೊಲೀಸರು ವಿಚಾರಣೆಗಾಗಿ ಗುರುವಾರ ನ್ಯಾಯಾಂಗ ಬಂಧನದಿಂದ ತಮ್ಮ ಕಸ್ಟಡಿಗೆ ಪಡೆದರು.

ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡನ ಅಳಿಯ ಸಿದ್ಧಗೊಂಡ ಮುಡವೆ, ಈಗಾಗಲೇ ಬಂಧಿತನಾಗಿರುವ ಹಣಮಂತ ಪೂಜಾರಿ ಸಹೋದರ ಭೀಮು ಪೂಜಾರಿ, ಚಡಚಣದ ಚಾಂದ್‌ ಹುಸೇನಿ ಚಡಚಣ ಜುಲೈ 2ರವರೆಗೆ ಸಿಐಡಿ ಕಸ್ಟಡಿಗೊಳಪಟ್ಟಿದ್ದಾರೆ.

ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಆರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಇಂಡಿ ಜೆಎಂಎಫ್‌ಸಿ ನ್ಯಾಯಾಲಯ ಜುಲೈ 12ರವರೆಗೆ ವಿಸ್ತರಿಸಿ, ಗುರುವಾರ ಆದೇಶ ನೀಡಿದೆ.

ಜಾಮೀನಿಗೆ ಅರ್ಜಿ: ‘ಮಹಾದೇವ ಭೈರಗೊಂಡ ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ದಾಖಲಾತಿ ಸಲ್ಲಿಸಲಿದ್ದೇವೆ’ ಎಂದು ಸಿಐಡಿ ಎಸ್‌ಪಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದರು.

‘ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಅವಶ್ಯ ಬಿದ್ದರೇ ಮತ್ತಷ್ಟು ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಿದ್ದೇವೆ. ದಾಳಿಯ ಸಂದರ್ಭ ಭೈರಗೊಂಡ ಮನೆಯಲ್ಲಿ ಸಾಕಷ್ಟು ವಸ್ತು ಸಿಕ್ಕಿವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !