ಉತ್ತಮ ವಾರ್ಡ್‌ ಮಾಡುವುದೇ ಗುರಿ

7
ಕೊಳ್ಳೇಗಾಲ ನಗರಸಭೆಯ ಮೊದಲ ವಾರ್ಡ್‌ ಸದಸ್ಯೆ ಕವಿತಾ ಮಾತು

ಉತ್ತಮ ವಾರ್ಡ್‌ ಮಾಡುವುದೇ ಗುರಿ

Published:
Updated:
Deccan Herald

ಕೊಳ್ಳೇಗಾಲ ನಗರಸಭೆಯ 1ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಪಿ.ಎಂ. ಕವಿತಾ ಅವರು ತಮ್ಮ ವಾರ್ಡ್‌ನ ಮುಂದಿನ ಅಭಿವೃದ್ಧಿ ಹಾಗೂ ತಮ್ಮ ಮುಂದಿರುವ ಸವಾಲುಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ನಿಮ್ಮ ಗೆಲು‌ವಿಗೆ ಏನು ಕಾರಣ?

ಉ: ಈ ಹಿಂದೆ ಭಾವ ಕೆ.ಕೆ. ಮೂರ್ತಿ ಇದೇ ವಾರ್ಡ್‌ನಿಂದ ಗೆದ್ದು ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅವ‌ರು ನೀಡಿದ ಪ್ರೋತ್ಸಾಹದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಪಕ್ಷೇತರ ಅಭ್ಯಥಿಯಾಗಿ ಸ್ಪರ್ಧಿಸಿದ ನನಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತು. ವಾರ್ಡಿನ ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಸಹಕಾರ ನನ್ನ ಗೆಲುವಿಗೆ ಸಹಕಾರಿಯಾಯಿತು.

* ನಿಮ್ಮ ವಾರ್ಡ್‌ನಲ್ಲಿರುವ ಸಮಸ್ಯೆಗಳೇನು?

ಉ: ಕಾವೇರಿ ನೀರು ಕೆಲವು ಕಡೆ ಬರುತ್ತಿದೆ. ಕೆಲವು ಕಡೆ ಬರುತ್ತಿಲ್ಲ ಮತ್ತು ಸ್ವಚ್ಚತೆ ಕಾಪಾಡಲು ಕಸದ ತೊಟ್ಟಿ ಇಲ್ಲದೆ ಕಸ ರಸ್ತೆಯಲ್ಲಿ ಹಾಕುವ ಪರಿಸ್ಥಿತಿ ಇದೆ. ಇದರಿಂದ ಸೊಳ್ಳೆ ಕಾಟ ಜಾಸ್ತಿಯಾಗಿದೆ. ನಗರಸಭೆ ಆರೋಗ್ಯ ನಿರೀಕ್ಷಕರಿಗೆ ತಿಳಿಸಿದರೆ ಬ್ಲೀಚಿಂಗ್‌ ಪೌಡರ್‌ ಪೌಡರ್ ಖಾಲಿ ಆಗಿದೆ. ಸೊಳ್ಳೆ ಔಷಧಿ ಇಲ್ಲ ಎನ್ನುತ್ತಾರೆ. ಹಾಗಾಗಿ ನಾನೇ ಹಣ ಕೊಟ್ಟು ಬ್ಲೀಚಿಂಗ್‌ ಪೌಡರ್ ಹಾಕಿಸಿದ್ದೇನೆ. ಸಭೆ ಸೇರಿದಾಗ ಇದೆಲ್ಲವನ್ನು ಪ್ರಸ್ತಾಪಿಸುತ್ತೇನೆ. ಈ ವಾರ್ಡ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಚರಂಡಿ ಹಾಗೂ ಒಳ ಚರಂಡಿ ಸಂಪರ್ಕವನ್ನು ಹಾಳುಮಾಡಿದ್ದಾರೆ. ಮಳೆ ಬಂದರೆ ಸಮಸ್ಯೆ ಹೇಳ ತೀರದಾಗಿದೆ. ಜೋರು ಮಳೆಯಾದರೆ ಮನೆಗಳಿಗೆ ನೀರು ನುಗ್ಗುವ ಪರಿಸ್ಥಿತಿ ಇದೆ. 

* ಏನೇನು ಯೋಜನೆಗಳನ್ನು ಹಾಕಿಕೊಂಡಿದ್ದೀರಿ?

ಉ: ಕೆಲವು ಕಡೆ ಬೀದಿ ದೀಪಗಳ ಅನನುಕೂಲ ಇದೆ. ವಿದ್ಯುತ್ ಕಂಬಗಳು ಶಿಥಿಲಗೊಂಡಿವೆ. ಇವೆಲ್ಲವನ್ನು ಸರಿ ಪಡಿಸಲು ಸಂಬಂಧಪಟ್ಟ ಅಧಿಕಾರಿಯ ಗಮನ ಸೆಳೆಯುತ್ತೇನೆ. ಸಂಸದರು ಹಾಗೂ ಶಾಸಕರೊಂದಿಗೆ ಚರ್ಚಿಸಿ ನಿರಾಶ್ರಿತರು ಹಾಗೂ ಬಡವರಿಗೆ ಮನೆ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇ-ಸ್ವತ್ತು ಮಾಡಿಕೊಡುವ ಬಗ್ಗೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬ ದೂರುಗಳಿವೆ. ನನ್ನ ವಾರ್ಡಿಗೆ ಹೊಂದಿಕೊಂಡಂತೆ ಹೊಸ ಬಡಾವಣೆ ನಿರ್ಮಾಣಗೊಂಡಿದೆ. ಮನೆ ಕಟ್ಟಿದವರಿಗೆ ಪರವಾನಗಿ ನೀಡಲು ಸತಾಯಿಸುತ್ತಿದ್ದಾರೆ. ಜಿ.ಪಿ.ಮಲ್ಲಪ್ಪಪುರಂ ಬಡಾವಣೆ ಹಾಗೂ ಹೊಸ ಅಣಗಳ್ಳಿಯಲ್ಲಿ ಈ ಸ್ವತ್ತು ಪಡೆಯಲು ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳಿವೆ. ಇವೆಲ್ಲವನ್ನೂ ಸರಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

* ವಾರ್ಡ್‌ನ ಸ್ವಚ್ಚತೆಗೆ ಏನು ಕ್ರಮ ಕೈಗೊಳ್ಳುತ್ತಿರಾ ?

ಉ: ಸ್ವಚ್ಛತೆ ಕಾಪಾಡುವುದಕ್ಕೇ ನನ್ನ ಆದ್ಯತೆ. ವಾರ್ಡ್‌ನಲ್ಲಿ ಸ್ವಚ್ಚತೆ ಇಲ್ಲದಿರುವುದು ನಿಜ. ಮುಂದಿನ ದಿನಗಳಲ್ಲಿ ವಾರ್ಡ್‌ನ ಎಲ್ಲ ಬೀದಿಗಳಲ್ಲೂ ಪ್ರತ್ಯೇಕ ಕಸದ ಬುಟ್ಟಿ ಇಡಲು ಕ್ರಮ ಕೈಗೊಳ್ಳುತ್ತೇನೆ. ಇಡೀ ನಗರ ಸಭೆಗೇ ನನ್ನದು ಉತ್ತಮ ವಾರ್ಡ್‌ ಆಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.

ಮೊದಲನೇ ಬಾರಿ ಸದಸ್ಯ ಸ್ಥಾನ

ಈಗ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿರುವ 1 ವಾರ್ಡ್‌ನಿಂದ ಆಯ್ಕೆಯಾಗಿರುವ ಕವಿತಾ ಅವರು ನಗರಸಭೆ ಸದಸ್ಯಸ್ಥಾನ ಅಲಂಕರಿಸಿರುವುದು ಇದು ಮೊದಲನೆಯ ಬಾರಿ. ಈ ಹಿಂದೆ ಅವರ ಭಾವ ಕೆ.ಕೆ.ಮೂರ್ತಿ ಈ ವಾರ್ಡ್‌ ಅನ್ನು ಪ್ರತಿನಿಧಿಸಿದ್ದರು.

ಕವಿತಾರಾಜೇಶ್ ಅವರ ಸಂಪರ್ಕ ಸಂಖ್ಯೆ: 8660983414

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !