ಬಲಿಗಾಗಿ ಬಾಯ್ತೆರೆದಿರುವ ಚರಂಡಿ

7

ಬಲಿಗಾಗಿ ಬಾಯ್ತೆರೆದಿರುವ ಚರಂಡಿ

Published:
Updated:
Prajavani

ವಿಜಯಪುರ: ಸಿಂದಗಿ ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಪೂಜಾರಿ ಓಣಿಯ ರಸ್ತೆ ಮಧ್ಯದಲ್ಲಿರುವ ಚರಂಡಿ ಬಾಯ್ತೆರೆದಿದೆ. ಇದರಿಂದ ಇಲ್ಲಿ ಸಂಚರಿಸುವವರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.

ಚರಂಡಿಯ ಮೇಲ್ಭಾಗಕ್ಕೆ ಹಾಕಿದ್ದ ಸಿಮೆಂಟ್‌ ಹಾಸು ಮುರಿದು ಬಿದ್ದಿವೆ. ಇದನ್ನು ಸರಿಪಡಿಸದಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಇಲ್ಲಿ ಸಂಚರಿಸಲು ಭಯವಾಗುತ್ತಿದೆ. ಹಲ ಬಾರಿ ಎತ್ತಿನ ಚಕ್ಕಡಿ, ಬೈಕ್, ಸೈಕಲ್‌ಗಳು ಚರಂಡಿಯ ಬಾಯ್ತೆರೆದ ಗುಂಡಿಯೊಳಗೆ ಸಿಲುಕಿ ನರಳಿವೆ.

ರಾತ್ರಿ ವೇಳೆ ಅಪಘಾತಗಳು ಸಂಭವಿಸಿವೆ. ಮಕ್ಕಳು ಆಯತಪ್ಪಿ ಬಿದ್ದಿರುವುದು ನಡೆದಿದೆ. ಈ ಬಗ್ಗೆ ಹಲ ಬಾರಿ ಗ್ರಾ.ಪಂ. ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇನ್ನಾದರೂ ಸಂಬಂಧಿಸಿದವರು ಸೂಕ್ತ ಕ್ರಮ ತೆಗೆದುಕೊಳ್ಳಲಿ.

ಮುತ್ತು ಕುಂಟೋಜಿ, ಹುಣಶ್ಯಾಳ

**
ಬಮ್ಮನಜೋಗಿ ಕೆರೆ ತುಂಬಿಸಿ
ಬರದ ಭೀಕರತೆ ದಿನ ಕಳೆದಂತೆ ಹೆಚ್ಚುತ್ತಿದೆ. ಜನ–ಜಾನುವಾರು ಹನಿ ನೀರಿಗೂ ತತ್ವಾರ ಪಡುವಂತಾಗಿದೆ. ಜನಪ್ರತಿನಿಧಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತಿದ್ದಾರೆ. ಅಧಿಕಾರಿಗಳು ನಮ್ಮ ಸಮಸ್ಯೆಯತ್ತ ಇನ್ನಾದರೂ ಗಮನಹರಿಸಿ, ಸಿಂದಗಿ ತಾಲ್ಲೂಕಿನ ಬಮ್ಮನಜೋಗಿ ಕೆರೆಗೆ ನೀರು ತುಂಬಿಸಿ. ನಮ್ಮ ಸಮಸ್ಯೆ ಬಗೆಹರಿಸಿ.

ವಿಠ್ಠಲ ಆರ್.ಯಂಕಂಚಿ, ಬಮ್ಮನಜೋಗಿ

**

ಅಧಿಕಾರಿಗಳ ಪ್ರತಿಕ್ರಿಯೆ
ದೇವರಹಿಪ್ಪರಗಿ ತಾಲ್ಲೂಕಿನ ಬಮ್ಮನಜೋಗಿ ಕುಗ್ರಾಮಕ್ಕೆ ಬಸ್‌ ಸೌಲಭ್ಯವಿಲ್ಲದಿರುವ ಕುರಿತಂತೆ, ಜ.17ರ ‘ಪ್ರಜಾವಾಣಿ’ ಸಂಚಿಕೆಯ ಕುಂದು–ಕೊರತೆ ಅಂಕಣದಲ್ಲಿ ಸಮಸ್ಯೆ ಬಿಂಬಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಭಾಗೀಯ ನಿಯಂತ್ರಣಾಧಿಕಾರಿ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಶೀಘ್ರದಲ್ಲೇ ಕ್ರಮ

ನಾಲತವಾಡ ಪಟ್ಟಣದ ವಿವಿಧೆಡೆ ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವ ಬಗ್ಗೆಯೂ ಇದೇ ಅಂಕಣದಲ್ಲಿ ಗಮನ ಸೆಳೆಯಲಾಗಿತ್ತು.

ಪಟ್ಟಣ ಪಂಚಾಯ್ತಿಯ ಕಿರಿಯ ಆರೋಗ್ಯ ನಿರೀಕ್ಷಕ ಚಂದ್ರು ಸಗರ, ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !