‘ವಿದೇಶಗಳಲ್ಲೂ ಸಹಕಾರ ಸಂಘಗಳ ಮಾದರಿ ಕಾರ್ಯ’

ಮಂಗಳವಾರ, ಮಾರ್ಚ್ 26, 2019
29 °C
ಪತ್ರಕರ್ತರ ಸಹಕಾರ ಸಂಘದ 70ನೇ ವಾರ್ಷಿಕ ಸಂಭ್ರಮದ ಅಂಗವಾಗಿ ವಿಚಾರಗೋಷ್ಠಿ

‘ವಿದೇಶಗಳಲ್ಲೂ ಸಹಕಾರ ಸಂಘಗಳ ಮಾದರಿ ಕಾರ್ಯ’

Published:
Updated:
Prajavani

ಬೆಂಗಳೂರು: ‘ಸಹಕಾರ ಸಂಘಗಳು ಕೆಲವು ರಾಷ್ಟ್ರಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ವೈದ್ಯಕೀಯ, ಬ್ಯಾಂಕ್‌, ಹೈನುಗಾರಿಕೆ, ಹನಿ ನೀರಾವರಿ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿವೆ’ ಎಂದು ಪ್ರಾದೇಶಿಕ ಸಹಕಾರ ಆಡಳಿತ ನಿರ್ವಹಣಾ ಸಂಸ್ಥೆಯ ಸಹಕಾರ ವಿಷಯ ತಜ್ಞ ಡಾ. ಎಸ್.ಎ. ಸಿದ್ಧಾಂತಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 70ನೇ ವಾರ್ಷಿಕ ಸಂಭ್ರಮ ನಿಮಿತ್ತ ಸಹಕಾರ ಸಂಘಗಳ ಅಭಿವೃದ್ಧಿ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

 'ಇಸ್ರೇಲ್‌ನಲ್ಲಿ ಹನಿ ನೀರಾವರಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಘಗಳು ಜಗತ್ತಿಗೆ ಮಾದರಿಯಾಗಿದ್ದು, ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸಿವೆ. ಸಣ್ಣ ಹಳ್ಳಿಗಳಲ್ಲೂ ಇಂತಹ ಸಂಘಗಳನ್ನು ಸ್ಥಾಪಿಸಿ ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸಲಾಗಿದೆ. ಸಹಕಾರ ಶಿಕ್ಷಣಕ್ಕೆ ಮಲೇಷ್ಯಾ ಅತ್ಯುತ್ತಮ ಉದಾಹರಣೆಯಾಗಿದೆ. ಥಾಯ್ಲೆಂಡ್‌ನಲ್ಲಿ ಪ್ರವಾಸೋದ್ಯಮಕ್ಕಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಪ್ರವಾಸಿಗರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸುವುದು ಈ ಸಂಘಗಳ ಉದ್ದೇಶವಾಗಿದೆ’ ಎಂದು ವಿವರಿಸಿದರು.

ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಎಚ್‌.ಎಸ್‌. ನಾಗರಾಜಯ್ಯ ಮಾತನಾಡಿ, ‘ಸಹಕಾರ ಸಂಘಗಳು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಕೇವಲ ಹೆಚ್ಚು ಬಡ್ಡಿ ದರ ವಿಧಿಸಲು ಗಮನನೀಡದೆ ವಹಿವಾಟು ಹೆಚ್ಚು ಮಾಡಲು ಮತ್ತು ಲಾಭದಾಯಕ ಯೋಜನೆಗಳನ್ನು ರೂಪಿಸಬೇಕು’ ಎಂದು ಸಲಹೆ ನೀಡಿದರು.

ಸಹಕಾರ ಮಹಾಮಂಡಳದ ಸಲಹೆಗಾರ ಪಿ. ರುದ್ರಪ್ಪ ಕರ್ನಾಟಕದಲ್ಲಿ ಸಹಕಾರ ಚಳವಳಿ ಬೆಳವಣಿಗೆ ಕುರಿತು ವಿವರಿಸಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ವಿಚಾರಗೋಷ್ಠಿ ಉದ್ಘಾಟಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !