ಸೋಮವಾರ, ಸೆಪ್ಟೆಂಬರ್ 16, 2019
22 °C

ಹಲ್ಲಿನಿಂದ 10 ನಿಮಿಷದಲ್ಲಿ 11 ತೆಂಗಿನಕಾಯಿ ಸುಲಿದ ಭೂಪ..!

Published:
Updated:

ನಾಲತವಾಡ: 10 ನಿಮಿಷದಲ್ಲಿ 11 ತೆಂಗಿನಕಾಯಿಗಳನ್ನು ಹಲ್ಲಿನಿಂದ ಸುಲಿಯುವ ಮೂಲಕ, ಪಟ್ಟಣದ ಯುವಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಪಟ್ಟಣದ ರಡ್ಡೇರಪೇಟೆಯ ನಿವಾಸಿ ಗಂಗಪ್ಪ ಸೋಮಪ್ಪ ಗಾದಿ ತೆಂಗಿನ ಕಾಯಿಗಳನ್ನು ಹಲ್ಲಿನಿಂದ ಸುಲಿಯುತ್ತಾರೆ. ಜಿದ್ದು ಕಟ್ಟುವ‌ ಓಣಿಯ ಯುವಕರ ಸ್ಪರ್ಧೆಯಲ್ಲಿ ಈ ಮುಂಚೆ 2 ನಿಮಿಷಕ್ಕೆ ಒಂದು ತೆಂಗಿನಕಾಯಿ ಸುಲಿಯುತ್ತಿದ್ದರು. ನಂತರ ನಿಮಿಷಕ್ಕೆ ಒಂದು, ಈಗ 54 ಸೆಕೆಂಡ್‌ಗಳಲ್ಲಿ 1 ತೆಂಗಿನಕಾಯಿ ಸುಲಿಯುತ್ತಿದ್ದಾರೆ.

42 ಸೆಕೆಂಡ್‌ಗಳಲ್ಲಿ ಹಲ್ಲಿನಲ್ಲಿ ಮೂರು ತೆಂಗಿನ ಕಾಯಿಗಳ ಸಿಪ್ಪೆಯನ್ನು ಸುಲಿದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ಪಿ.ಜಿ.ಗೌತಮ್ ವರ್ಮರವರ ಸಾಧನೆಯನ್ನು ಹಿಂದಿಕ್ಕುವ ಉತ್ಸಾಹ ಹಾಗೂ ತಯಾರಿ ನಡೆಸಿದ್ದಾರೆ ಗಂಗಪ್ಪ ಗಾದಿ.

Post Comments (+)