ಭಾನುವಾರ, ಡಿಸೆಂಬರ್ 6, 2020
19 °C

ಮಾಸ ಭವಿಷ್ಯ: 2020ರ ಅಕ್ಟೋಬರ್ 1 ರಿಂದ 30ರವರೆಗೆ

ಪ್ರಶಾಂತ ಭಟ್ ಹೆಗ್ಗಾರ್ Updated:

ಅಕ್ಷರ ಗಾತ್ರ : | |

ಮೇಷ

ವಿಶ್ರಾಂತಿ, ಪ್ರೀತಿ, ಪ್ರವಾಸಕ್ಕೆ ಪ್ರಶಸ್ತವಾದ ಸಮಯ. ಉಳಿತಾಯ ಮಾಡಿ, ಜೊತೆಗೆ ಸ್ವಂತದ ಚಿಕ್ಕಪುಟ್ಟ ಕನಸುಗಳಿಗೂ ಒಂದಷ್ಟು ಆದ್ಯತೆ ನೀಡಿ. ಸ್ವಂತದ ಖುಷಿಗಾಗಿ ಹಣ ವ್ಯಯಿಸುವುದರಲ್ಲಿ ತಪ್ಪಿಲ್ಲ.

ಶುಭ: 11, 15, 21, 22, 28‌

ಅಶುಭ: 9, 14, 16, 20, 30

***

ವೃಷಭ

ಆರೋಗ್ಯ ವ್ಯತ್ಯಾಸಗಳನ್ನು ಕಡೆಗಣಿಸಬೇಡಿ. ಚಿಕ್ಕಪುಟ್ಟ ತೊಂದರೆಗಳು ಕಂಡರೂ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ತಿಂಗಳ ಎರಡನೇ ವಾರದಲ್ಲಿ ಕಚೇರಿಯಲ್ಲಿ ನಡೆಯುವ ಘಟನೆಗಳಿಂದ ವಿಚಲಿತರಾಗುವಿರಿ. ತಾಳ್ಮೆ ಇರಲಿ.

ಶುಭ: 15, 19, 22, 24, 30

ಅಶುಭ: 10, 14, 18, 25, 28

***

ಮಿಥುನ

ಅನಿರೀಕ್ಷಿತ ಅತಿಥಿಯ ಆಗಮನದಿಂದ ಸಂತಸ.ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಲಿವೆ. ಅದಕ್ಕಾಗಿ ಸಿದ್ಧರಾಗಿ. ಹಿರಿಯ ಮಹಿಳೆಯೊಬ್ಬರು ನೀಡುವ ಅಮೂಲ್ಯ ಸಲಹೆಗಳಿಂದ ಅನುಕೂಲ.

ಶುಭ: 5, 12, 16, 18, 21

ಅಶುಭ: 10, 11, 17, 25, 28

***

ಕಟಕ

ಸ್ಥಿರ ಮತ್ತು ಶಾಶ್ವತ ಭಾವನಾತ್ಮಕ ಸಂಬಂಧ ಬೆಸೆಯುವ ಅವಕಾಶಗಳು ಎದುರಾಗಲಿವೆ. ಧನಸ್ಸು, ಕನ್ಯಾ ಮತ್ತು ಮಿಥುನ ರಾಶಿಯವರು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಮಹತ್ತ್ವದ ಪಾತ್ರ ವಹಿಸಲಿದ್ದಾರೆ.

ಶುಭ: 12, 19, 23, 25, 28

ಅಶುಭ: 11, 18, 21, 29, 30

***

ಸಿಂಹ

ವೃತ್ತಿಪರ ವಿಷಯಗಳಿಗೆ ಹೆಚ್ಚು ಗಮನ ನೀಡಬೇಕಾಗುವುದು. ನಿಮ್ಮ ಜೀವನದಲ್ಲಿ ಏನಿದೆ, ಏನಿಲ್ಲ ಎಂಬುದನ್ನು ವಿಶ್ಲೇಷಿಸಿ. ನಿಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸೂಕ್ತ ಸಮಯಕ್ಕಾಗಿ ಕಾಯಬೇಕು.

ಶುಭ: 6, 17, 21, 25, 30

ಅಶುಭ: 7, 9, 16, 26, 27

***

ಕನ್ಯಾ

ತಿಂಗಳ ಆರಂಭದಲ್ಲಿ ಪ್ರಯಾಣ ಮತ್ತು ವಿಶ್ರಾಂತಿಗಾಗಿ ಹಂಬಲಿಸುವಿರಿ. ಹಿಂದಿನ ವಿಚಾರಗಳು ಈಗ ನಿರೀಕ್ಷಿತ ಫಲಿತಾಂಶ ತರಲಿವೆ. ನಿಮ್ಮ ಆರೋಗ್ಯದ ಬಗ್ಗೆ ಯೋಚಿಸಿ, ಕ್ರೀಡೆಗಳಲ್ಲಿ ಭಾಗಿಯಾಗಿ.

ಶುಭ: 2, 12, 16, 24, 26

ಅಶುಭ: 3, 6, 10, 11, 25

***

ತುಲಾ

ತಿಂಗಳ ಆರಂಭದಲ್ಲಿ ಬಹಳ ಮುಖ್ಯವಾದ ಸಂದೇಶ ಪಡೆಯುವಿರಿ. ಸ್ನೇಹಿತರೊಂದಿಗೆ ಮೋಜಿನ ಕ್ಷಣಗಳನ್ನು ಕಳೆಯಲು ಸಿದ್ಧರಾಗಿ. ತಿಂಗಳ ಕೊನೆಯಲ್ಲಿ ನಿಮ್ಮ ಮೇಲಿನ ನಿರೀಕ್ಷೆಗಳು ಸಾಕಷ್ಟು ಹೆಚ್ಚಲಿವೆ.

ಶುಭ: 7, 8, 16, 20, 21

ಅಶುಭ: 3, 4, 6, 26, 28

***

ವೃಶ್ಚಿಕ

ಮನೆಯ ಖರ್ಚು–ವೆಚ್ಚದ ಮೇಲೆ ಗಮನವಿರಲಿ; ವಿಶೇಷವಾಗಿ ತಿಂಗಳ ದ್ವಿತೀಯಾರ್ಧದಲ್ಲಿ.ನಿಮಗೀಗ ಕೆಲವು ದಿನಗಳ ಪ್ರವಾಸ ಅಥವಾ ವಿಶ್ರಾಂತಿಯ ಅಗತ್ಯವಿದೆ. ಪ್ರವಾಸಕ್ಕೆ 14ರಿಂದ 21 ಸೂಕ್ತ ಸಮಯ.

ಶುಭ: 5, 10, 20, 21, 23

ಅಶುಭ: 6, 7, 9, 27, 28

***

ಧನು

ವೃತ್ತಿಜೀವನಕ್ಕೆ ಹೆಚ್ಚಿನ ಗಮನ ಕೊಡಿ. ಕೆಲ ದಿನ ಸಾಮಾಜಿಕ ಜೀವನದಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ನಿಮ್ಮ ಕೆಲಸದ ವೈಖರಿ, ಬದ್ಧತೆ ಮತ್ತು ಕೌಶಲಗಳನ್ನು ಮೇಲಿನವರು ಗಮನಿಸುತ್ತಿದ್ದಾರೆ.

ಶುಭ: 4, 13, 22, 26, 28

ಅಶುಭ: 3, 6, 11, 16, 18

***

ಮಕರ

ತಿಂಗಳ ಆರಂಭದಲ್ಲಿ ಸಹೋದ್ಯೋಗಿಗಳಿಂದ, ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ. ಇದರಿಂದ ನಿಮ್ಮ ಸ್ವಾಭಿಮಾನ ಹೆಚ್ಚಲಿದೆ. ಆದಾಗ್ಯೂ ನಿಮ್ಮ ಭಾವನೆಗಳಲ್ಲಿ ಏರಿಳಿತಗಳು ಉಂಟಾಗುವ ಸಮಯವಿದು. ತಾಳ್ಮೆಯಿಂದಿರಿ.

ಶುಭ: 1, 15, 19, 22, 26

ಅಶುಭ: 3, 9, 14, 28, 30

***

ಕುಂಭ

ಈ ಮಾಸ ನಿಮಗೆ ಅತ್ಯಂತ ಸಕ್ರಿಯ ಮತ್ತು ಚಟುವಟಿಕೆಯ ತಿಂಗಳಾಗಲಿದೆ. ಎರಡನೇ ವಾರದಲ್ಲಿ ಕುಟುಂಬದ ಸದಸ್ಯರಿಗೆ ವಿಶೇಷ ಗಮನ ಕೊಡಿ. ತಿಂಗಳ ಮಧ್ಯದಲ್ಲಿ ಸೃಜನಶೀಲ ಕೌಶಲ್ಯಗಳು ವೃದ್ಧಿಸಲಿವೆ.

ಶುಭ: 3, 18, 23, 24, 26

ಅಶುಭ: 4, 7, 10, 14, 19

***

ಮೀನ

ಬಹಳ ಗಂಭೀರವಾದ ಕಾರ್ಯವನ್ನು ಕೈಗೊಳ್ಳುವಿರಿ. ಇದರಿಂದ ವಿಶ್ರಾಂತಿ, ಮನರಂಜನೆ ಹಾಗೂ ಕುಟುಂಬಕ್ಕೆ ಸಮಯ ಸಿಗದು. ಆದರೆ, ನಿಮ್ಮ ಆರೋಗ್ಯ, ಯೋಗಕ್ಷೇಮದ ಬಗೆಗೂ ಗಮನ ನೀಡುವುದು ಉತ್ತಮ.

ಶುಭ: 4, 9, 11, 21, 29

ಅಶುಭ: 5, 8, 16, 17, 30

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.