ಸೋಮವಾರ, ನವೆಂಬರ್ 28, 2022
20 °C

ವಾರ ಭವಿಷ್ಯ: 20–11–2022 ರಿಂದ 26–11–2022

ಡಾ.ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ

ಅಶ್ವನಿ, ಭರಣಿ, ಕೃತ್ತಿಕಾ 1ನೇ ಪಾದ

ನಿರ್ಧಾರಗಳಲ್ಲಿ ದೃಢತೆ ಹೆಚ್ಚಿಸಿಕೊಳ್ಳಿರಿ. ಧನಾದಾಯಕ್ಕೆ ಕೊರತೆ ಇರುವುದಿಲ್ಲ. ಒಡಹುಟ್ಟಿದವರೊಡನೆ ವಾಗ್ವಾದ ಬೇಡ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ. ಮಕ್ಕಳಿಗೆ ಧನಸಹಾಯ ಮಾಡುವಿರಿ. ಹರಿತವಾದ ಆಯುಧಗಳಿಂದ ಗಾಯವಾಗುವ ಸಾಧ್ಯತೆ. ನವವಿವಾಹಿತರಲ್ಲಿ ಉತ್ತಮ ಹೊಂದಾಣಿಕೆ ಮೂಡುತ್ತವೆ. ಸಂಗಾತಿಗೆ ಹೆಚ್ಚು ಧನಲಾಭವಾಗುವ ಸಾಧ್ಯತೆ ಇದೆ.

 

ಮಿಥುನ *

ಮೃಗಶಿರ 3,4, ಆರ್ದ್ರಾ, ಪುನರ್ವಸು 1,2,3ನೇ ಪಾದ

ಈ ವಾರ ಧನಾದಾಯ ಉತ್ತಮ. ನೆಂಟರಿಗೆ ಕೊಟ್ಟಿದ್ದ ಸಾಲ ವಾಪಸ್‌ ಬರುತ್ತದೆ. ನೀವು ಇಚ್ಛಿಸಿದ್ದ ಆಸ್ತಿ ಕೈವಶ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಸಂತಾನ ಅಪೇಕ್ಷಿಸುವವರಿಗೆ ಫಲವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕುತ್ತದೆ. ಅನಿರೀಕ್ಷಿತ ಧನಲಾಭ. ಹಲ್ಲಿನ ತೊಂದರೆ ಬಾಧಿಸಬಹುದು. ಧಾರ್ಮಿಕ ಕ್ಷೇತ್ರಗಳಿಗೆ ದರ್ಶನಕ್ಕಾಗಿ ಹೋಗುವ ಯೋಗವಿದೆ.

ಕಟಕ *

ಪುನರ್ವಸು 4, ಪುಷ್ಯ, ಆಶ್ಲೇಷ

ಈ ವಾರ ಆಲಸ್ಯದ ವಾತಾವರಣ. ಸಂಗೀತಗಾರರಿಗೆ ಉತ್ತಮ ಗೌರವ ಸಿಗಲಿದೆ. ಜತೆಗೆ, ಸಾಧನೆ ಮಾಡುವ ಯೋಗವಿದೆ. ಸರ್ಕಾರದಿಂದ ಧನಾದಾಯ ಹೆಚ್ಚುತ್ತದೆ. ಶತ್ರುಗಳನ್ನು ಬಗ್ಗು ಬಡಿಯಬಹುದು. ಖಾಸಗಿ ಸಾಲ ಮಾಡಿರುವವರು ಎಚ್ಚರವಹಿಸಬೇಕಿದೆ. ಸಾಲ ಕೊಟ್ಟವರು ಅವಮಾನಿಸುವ ಸಾಧ್ಯತೆ. ಸಂಸಾರದಲ್ಲಿ ಏರುಪೇರು. ವಾಹನಗಳ ಮಾರಾಟ ಮಾಡುವವರಿಗೆ ಮತ್ತು ಬಿಡಿಭಾಗ ಮಾರುವವರಿಗೆ ಲಾಭ.

ಸಿಂಹ 

ಮಖ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1ನೇ ಪಾದ

ದೃಢ ನಿರ್ಧಾರಗಳಿಂದ ಮುಂದುವರೆಯುವಿರಿ. ಕಟ್ಟಡ ನಿರ್ಮಾಣ ಮಾಡುವ ಸಂಸ್ಥೆಗಳಿಗೆ ಮತ್ತು ಗುತ್ತಿಗೆದಾರರಿಗೆ ಲಾಭ. ಕಟ್ಟಡ ನಿರ್ಮಾಣ ಮಾಡುವ ಸಾಮಗ್ರಿ ಮಾರುವವರಿಗೂ ಉತ್ತಮ ಲಾಭ. ಹಿರಿಯ ಸೋದರಿ ಅಥವಾ ತಾಯಿಯಿಂದ ಆರ್ಥಿಕ ಸಹಾಯ. ಉನ್ನತ ಶಿಕ್ಷಣ ಓದುತ್ತಿರುವವರಿಗೆ ಮಧ್ಯಮ ಫಲಿತಾಂಶ. ಉದರ ಬೇನೆ.

ಕನ್ಯಾ *

ಈ ವಾರ ಕೋಪಿಷ್ಠರಾಗುವಿರಿ. ನಿಮ್ಮ ಮಾತು ಛಾಟಿ ಏಟಿನಂತಿರುತ್ತದೆ.  ಧನಾದಾಯಕ್ಕೆ ಕೊರತೆ ಇಲ್ಲ. ಒಡಹುಟ್ಟಿದವರು ಮತ್ತು ಬಂಧುಗಳೊಡನೆ ಸಂಬಂಧ ವೃದ್ಧಿ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ವಾರ. ಕೃಷಿಕರಿಗೆ ಉತ್ತಮ ವಾರ. ಜತೆಗೆ, ಉತ್ತಮ ಧನದಾಯ ಒದಗುವ ಯೋಗ. ಮಕ್ಕಳನ್ನು ದತ್ತು ತೆಗೆದುಕೊಳ್ಳುವವರಿಗೆ ಒಳ್ಳೆಯದಾಗಲಿದೆ. 

ತುಲಾ *

ಅತಿಹೆಚ್ಚು ಧನಸಂಗ್ರಹ ಮಾಡುವಿರಿ. ಹೊಗಳಿಕೆಯ ಮಾತನಾಡಿ ಎಲ್ಲರನ್ನೂ ಮೋಡಿಮಾಡಿ ಕೆಲಸ ಸಾಧಿಸುವಿರಿ.  ಹಿರಿಯರ ಸಾಧನೆಗಳ ಬಗ್ಗೆ ಜನರ ಮುಂದೆ ಹೇಳಿ ಗೌರವ ಪಡೆಯುವಿರಿ. ಸ್ಥಿರಾಸ್ತಿ ಸಂಬಂಧ ತಲೆದೋರಿದ್ದ ಗಲಾಟೆಯು ಹಣದಿಂದ ಪರಿಹಾರ ಕಾಣಲಿದೆ. ಮಕ್ಕಳಿಂದ ನಿಮಗೆ ಗೌರವ ದೊರೆಯಲಿದೆ. ಪಿತ್ತ ವಿಕಾರಗಳಿಂದ ದೇಹದಲ್ಲಿ ತೊಂದರೆ ಕಾಣಿಸಬಹುದು. ಸಂಗಾತಿಯು ವಿಹಾರಕ್ಕೆ ಹೋಗಲು ಹಠ ಹಿಡಿಯಲಿದ್ದಾರೆ.

ವೃಶ್ಚಿಕ 

ವಿಶಾಖ 4, ಅನೂರಾಧ, ಜ್ಯೇಷ್ಠ

ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಉತ್ತಮ ಕಾಲ. ಸ್ವಂತ ಗೌರವದ ಬಗ್ಗೆ ಅತಿಯಾದ ಕಾಳಜಿ ಇರುತ್ತದೆ. ಮಾತು ಬಹಳ ಚುರುಕು. ತಲುಪಬೇಕಾದ ವ್ಯಕ್ತಿಗೆ ಸರಿಯಾಗಿ ತಲುಪುತ್ತದೆ. ಧನದ ಒಳಹರಿವು ಮತ್ತು ಖರ್ಚು ಸಮನಾಗಿರುತ್ತದೆ. ಈ ವಾರ ಸಾಕಷ್ಟು ಗೌಪ್ಯತೆ ಕಾಯ್ದುಕೊಳ್ಳುವಿರಿ.   ಕೃಷಿಯಿಂದ ಸಾಕಷ್ಟು ಲಾಭ. ಮಕ್ಕಳು ಮತ್ತು ಹೆಂಡತಿಗಾಗಿ ಒಡವೆ ಖರೀದಿ. 

ಧನು *

ಮೂಲ, ಪೂರ್ವಾಷಾಡ, ಉತ್ತರಾಷಾಡ 1

ಕೆಲಸಗಳಲ್ಲಿ ಮಂದಗತಿ. ಧನಾದಾಯ ಸಾಮಾನ್ಯ. ಬಂಧುಗಳಿಗೆ ನಿಮ್ಮ ಬಗ್ಗೆ ಅಸೂಯೆ. ಭೂ ವ್ಯವಹಾರ ಮಾಡುವ ದಳ್ಳಾಳಿಗಳಿಗೆ ಕಮಿಶನ್‌ ದೊರೆಯುತ್ತದೆ. ಶಾಲಾ– ಕಾಲೇಜು ನಡೆಸುವವರಿಗೆ ಉತ್ತಮ ಧನಾದಾಯ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಎಲೆಕ್ಟ್ರಾನಿಕ್ಸ್ ಉದ್ಯಮ ನಡೆಸುವವರಿಗೆ ಅಭಿವೃದ್ಧಿ. ಕ್ರೀಡಾಪಟುಗಳಿಗೆ ಅವರ ಸಾಧನೆಗೆ ಬೇಕಾದ ಸೌಲಭ್ಯ ಸಿಗುತ್ತದೆ.

ಮಕರ

ಉತ್ತರಾಷಾಡ 2,3,4, ಶ್ರವಣ, ಧನಿಷ್ಠ 1,2ನೇ ಪಾದ

ಧರ್ಮ ವಿದ್ಯೆ ಕಲಿತವರಿಗೆ ಗೌರವ ದೊರೆಯುತ್ತದೆ. ತಂದೆಯಿಂದ ದೊರೆತ ಮಾರ್ಗದರ್ಶನದಿಂದ ಒಳಿತಾಗಲಿದೆ. ಕ್ರೀಡಾಪಟುಗಳು ತಮ್ಮ ಜೀವಮಾನದ ಸಾಧನೆ ತೋರಬಹುದು. ಧನಲಾಭ ಉತ್ತಮ। ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಉಪಕರಣಗಳ ತಯಾರಿಸುವ ಮತ್ತು ಮಾರಾಟ ಮಾಡುವವರಿಗೆ ಅನುಕೂಲವಿದೆ. ಪಾಲುದಾರಿಕೆಯ ವ್ಯವಹಾರದಲ್ಲಿ ನಿಮ್ಮ ಬಂಡವಾಳಕ್ಕೆ ಸಾಕಷ್ಟು ಲಾಭ ಸಿಗಲಿದೆ. 

ಕುಂಭ 

ಧನಿಷ್ಠ 3,4, ಶತಭಿಷಾ, ಪೂರ್ವಾಭಾದ್ರ 1,2,3ನೇ ಪಾದ

ಹಿರಿಯರು ಸಾಕಷ್ಟು ಧರ್ಮಭೀರುವಾಗಿರುತ್ತಾರೆ. ಧರ್ಮ ಮತ್ತು ಅದರ ಮೂಲದ ಬಗ್ಗೆ ಸಾಕಷ್ಟು ಉಪನ್ಯಾಸ ನೀಡಬಹುದು. ಹೊಟ್ಟೆಯಲ್ಲಿ ಅಜೀರ್ಣ ತೊಂದರೆ. ಯುವಕರು ತಮ್ಮ ಪ್ರೇಮ ನಿವೇದನೆ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವ ಸಾಧ್ಯತೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯ ಯೋಗ. ಜತೆಗೆ, ಅವರ ಜವಾಬ್ದಾರಿಯೂ ಹೆಚ್ಚುತ್ತದೆ.

ಮೀನ 

ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ

ಈ ವಾರ ವೆಚ್ಚ ಏರುವ ಸಾಧ್ಯತೆ. ಖರ್ಚು ಕಡಿಮೆ ಮಾಡುವುದು ಒಳಿತು. ಸಂಗಾತಿಯಿಂದ ಅನಿರೀಕ್ಷಿತವಾಗಿ ಧನಸಹಾಯ. ನೆಂಟರೊಡನೆ ವಾಗ್ವಾದ. ತಂದೆಯವರೊಡನೆ ಸಂಬಂಧಗಳು ಸುಧಾರಿಸುತ್ತವೆ. ಸ್ಥಿರಾಸ್ತಿಯ ದಾಖಲೆಗಳಲ್ಲಿ ವ್ಯತ್ಯಾಸ ಕಾಣಬಹುದು. ಈ ವಾರ ಕಣ್ಣಿನ ತೊಂದರೆ ಕಾಡಬಹುದು. ಸಂಗಾತಿಗೆ ಸ್ಥಿರಾಸ್ತಿ ಒದಗುವ ಯೋಗವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.