627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

7

627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Published:
Updated:
Deccan Herald

ಬೆಂಗಳೂರು: ಪಿಇಎಸ್‌ ತಾಂತ್ರಿಕ ಕಾಲೇಜಿನ ರ‌್ಯಾಂಕ್ ಗಳಿಸಿದ 91 ವಿದ್ಯಾರ್ಥಿಗಳು ಸೇರಿದಂತೆ 627 ಪದವೀಧರರಿಗೆ ಕೇಂದ್ರ ಜಾಗೃತ ಆಯೋಗದ ಆಯುಕ್ತ ಕೆ.ವಿ.ಚೌಧರಿ ಶನಿವಾರ ಪದವಿ ಪ್ರದಾನ ಮಾಡಿದರು.

‘ಹಿರಿಯರನ್ನು ಗೌರವಿಸಿ. ಜ್ಞಾನ ಹೆಚ್ಚಿಸಿಕೊಳ್ಳಿ. ಜೀವನದ ಕೊನೆಗಾಲದವರೆಗೂ ಕಲಿಯುತ್ತಲೇ ಇರಿ’ ಎಂದು ಪದವೀಧರರಿಗೆ ಅವರು ಕಿವಿಮಾತು ಹೇಳಿದರು.

ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್‌.ದೊರೆಸ್ವಾಮಿ,‘ನಿಮ್ಮ ಶ್ರೇಯಸ್ಸಿಗೆ ಕಾರಣರಾದ ಶಿಕ್ಷಕರನ್ನು ಮರೆಯಬೇಡಿ. ಕಾರ್ಯಕೌಶಲಗಳನ್ನು ರೂಢಿಸಿಕೊಂಡು ಹೆಸರಾಂತ ಕಂಪನಿಗಳ ಮುಖ್ಯ ಹುದ್ದೆಗಳನ್ನು ಅಲಂಕರಿಸಿ’ ಎಂದು ಹಾರೈಸಿದರು.

‘ವಿಶ್ವವಿದ್ಯಾಲಯವು ಅಂತರರಾಷ್ಟ್ರೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಇಂಟರ್ನ್‌ಷಿಪ್‌ ಮಾಡಬಹುದಾಗಿದೆ. ಈಗಾಗಲೇ 130 ವಿದ್ಯಾರ್ಥಿಗಳು ಈ ಇಂಟರ್ನ್‌ಷಿಪ್‌ ಪೂರೈಸಿದ್ದಾರೆ’ ಎಂದರು.

ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು: ಎಂ.ಎಸ್.ಸ್ವರ್ಣಶ್ರೀ, ಶ್ರೀಹರ್ಷ ಅಧ್ಯಾಪಕ್‌, ವರುಣ್‌ ರಾವ್, ಸೌರವ್‌ ಶಾಸ್ತ್ರಿ, ಜಿ.ಸ್ವಾತಿ ಭಟ್‌, ಮೊಹಮ್ಮದ್‌ ಆಯೂಬ್‌, ಎಸ್‌.ಎ.ಮೀನಾಕ್ಷಿ, ಜಿ.ಕಾರ್ತಿಕ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !