ಶೀಘ್ರ ಒತ್ತುವರಿ ತೆರವು: ತಹಶೀಲ್ದಾರ್‌

7

ಶೀಘ್ರ ಒತ್ತುವರಿ ತೆರವು: ತಹಶೀಲ್ದಾರ್‌

Published:
Updated:
Deccan Herald

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ಚನ್ನೋಹಳ್ಳಿ ಗ್ರಾಮದಲ್ಲಿ ಸರ್ಕಾರಿ ರಸ್ತೆ ಒತ್ತುವರಿಯಾಗಿರುವ ದೂರಿನ ಮೇರೆಗೆ ತಹಶೀಲ್ದಾರ್‌ ಕೆ.ಎನ್.ರಾಜಶೇಖರ್‌, ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದ ಒಣಿಯು ಖಾಸಗಿಯವರಿಂದ ಒತ್ತುವರಿಯಾಗಿದೆ. ಈ ಪ್ರದೇಶವನ್ನು ಅಳತೆ ಮಾಡಿಕೊಡಲು ಸರ್ವೇ ಇಲಾಖೆಗೆ ಸೂಚಿಸಿದ್ದು, ಆದಷ್ಟು ಶೀಘ್ರ ಒತ್ತುವರಿ ತರೆವುಗೊಳಿಸಲಾಗುವುದು’ ಎಂದು ತಹಶೀಲ್ದಾರ್‌ ಹೇಳಿದರು.

ಸರ್ಕಾರಿ ಜಮೀನು ಒತ್ತುವರಿ ಸಂಬಂಧ ತಾಲ್ಲೂಕಿನುದ್ದಕ್ಕೂ ದೂರುಗಳು ಬರುತ್ತಿವೆ. ಹೀಗೆ ಬಂದ ದೂರುಗಳನ್ನು ಖುದ್ದು ನಾನೇ ಹೋಗಿ ಪರಿಶೀಲಿಸುತ್ತಿದ್ದೇನೆ. ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಯಾಗಿದ್ದರೂ, ಕಾನೂನಿಗೆ ಆತೀತರಲ್ಲ. ಕಾನೂನು ರೀತಿಯಲ್ಲಿ ಒತ್ತುವರಿ ತೆರವುಗೊಳ್ಳಲೇಬೇಕು ಎಂದರು.

ಪ್ರೊಬೇಷನರಿ ತಹಶೀಲ್ದಾರ್‌ ಶಿಲ್ಪಾ, ಸೋಂಪುರ ಹೋಬಳಿ ನಾಡಕಚೇರಿಯ ಉಪತಹಶೀಲ್ದಾರ್‌ ಜುಂಜೇಗೌಡ, ಸೋಂಪುರ-೨ ರಾಜಸ್ವ ನಿರೀಕ್ಷಕರಾದ ಪಂಚಾಕ್ಷರಿ ಮತ್ತು ಗ್ರಾಮ ಲೆಕ್ಕಿಗರಾದ ಶ್ವೇತಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !